ಧಾರವಾಡ: ರಷ್ಯಾ, ಉಕ್ರೇನ್ ದೇಶಗಳ ಮಧ್ಯದ ಯುದ್ಧದ ಪರಿಣಾಮವೋ ಏನೋ ಭಾರತದಲ್ಲಿ ಹೆಚ್ಚಳವಾಗುತ್ತಲೇ ಇರುವ ತೈಲ ಬೆಲೆ ಇದೀಗ ಗ್ರಾಹಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ವಾಹನಗಳನ್ನೇ ಅವಲಂಬಿಸಿರುವ ಮಧ್ಯಮ ವರ್ಗದ ಜನ ಹಾಗೂ ರೈತರು ತೈಲ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿದ್ದಾರೆ. ಸರ್ಕಾರವೇನೋ ಈ ಹಿಂದೆ ತೈಲ ಬೆಲೆ ಇಳಿಕೆ ಮಾಡಿದಂತೆ ಮಾಡಿ ಇದೀಗ ಅದಕ್ಕಿಂತ ದುಪ್ಪಟ್ಟು ದರವನ್ನು ಏರಿಕೆ ಮಾಡಿ ಗ್ರಾಹಕರ ಮೇಲೆ ದೊಡ್ಡ ಹೊರೆಯನ್ನೇ ಹೊರಿಸಿದೆ.
ಪೆಟ್ರೋಲ್ ಪ್ರತಿ ಲೀಟರ್‌ಗೆ 103.67 ಪೈಸೆ ಇದ್ದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ 87.92 ಪೈಸೆ ಇದೆ. ದಿನೇ ದಿನೇ ತೈಲ ಬೆಲೆ ಏರಿಕೆಯಾಗುತ್ತಲೇ ಇರುವುದರಿಂದ ಜನತೆ ಕಂಗೆಟ್ಟಿದ್ದಾರೆ. ಪಂಚರಾಜ್ಯಗಳ ಚುನಾವಣೆ ನಂತರ ತೈಲ ಬೆಲೆ ಏರಿಕೆಯಾಗಿದೆ. ಚುನಾವಣೆಗೂ ಮುನ್ನ ತೈಲ ಬೆಲೆ ಇಳಿಕೆ ಮಾಡಿದ್ದ ಸರ್ಕಾರ ಚುನಾವಣೆ ನಂತರ ಮತ್ತೊಮ್ಮೆ ಬೆಲೆ ಹೆಚ್ಚಳ ಮಾಡಿದೆ. ಬನ್ನಿ ಹಾಗಾದ್ರೆ ತೈಲ ಬೆಲೆ ಹೆಚ್ಚಳದ ಬಗ್ಗೆ ಧಾರವಾಡದ ಗ್ರಾಹಕರು ಏನು ಹೇಳಿದ್ದಾರೆ ಕೇಳೋಣ
ಕೇಳಿದ್ರಲ್ಲ ಕೆಲ ಗ್ರಾಹಕರು ಅಂತರರಾಷ್ಟ್ರೀಯ ಮಟ್ಟದಲ್ಲೇ ಬೆಲೆ ಹೆಚ್ಚಳವಾದಗ ಸರ್ಕಾರವಾದರೂ ಏನು ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ರೈತರ ಮತ್ತು ಮಧ್ಯಮ ವರ್ಗದ ಜನರ ಹಿತದೃಷ್ಠಿಯಿಂದ ಸರ್ಕಾರ ಕೂಡಲೇ ಬೆಲೆ ಇಳಿಕೆ ಮಾಡಬೇಕು ಎಂಬ ಒತ್ತಾಯವನ್ನು ಅನೇಕರು ಮಾಡಿದ್ದಾರೆ. ಬರುವ ದಿನಗಳಲ್ಲಿ ಈ ತೈಲ ಬಿಸಿಯನ್ನು ಸರ್ಕಾರ ತಣ್ಣಗೆ ಮಾಡುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
26/03/2022 05:20 pm