ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಸಿ ಕೋಚ್ ನಲ್ಲಿ ಸಿಗ್ತಿಲ್ಲ ಬೆಡ್ ಶೀಟ್, ದಿಂಬು : ಅವ್ಯವಸ್ಥೆ ಕಂಡು ಪ್ರಯಾಣಿಕ ದಂಗು

ಹುಬ್ಬಳ್ಳಿ: ಕೋವಿಡ್ ಸಂದರ್ಭದಲ್ಲಿ ಬಂದ್ ಆಗಿದ್ದ ರೈಲ್ವೆ ಸೇವೆ ಕೋವಿಡ್ ನಂತರದಲ್ಲಿ ಆರಂಭಗೊಂಡಿದ್ದರೂ ಕೂಡ ಕೆಲವೊಂದು ಸೇವೆಗಳು ಮಾತ್ರ ಇನ್ನೂ ಆರಂಭವಾಗಿಲ್ಲ. ಅಲ್ಲದೇ ಕೋವಿಡ್ ಕರಿನೆರಳು ದೂರವಾಗಿದ್ದರೂ ಬಹುತೇಕ ಸೇವೆಗಳು ಜನರ ಕೈಸೇರುವಲ್ಲಿ ಸಾಕಷ್ಟು ವಿಳಂಬವಾಗುತ್ತಿವೆ.

ನೈಋತ್ಯ ರೈಲ್ವೆ ವಲಯ ಸೇರಿದಂತೆ ಭಾರತೀಯ ರೈಲ್ವೆಯಲ್ಲಿ ಕೋವಿಡ್ ಸಂದರ್ಭದಲ್ಲಿ ರೈಲು ಸೇವೆ ಬಂದ್ ಮಾಡಲಾಗಿತ್ತು. ಅಲ್ಲದೇ ವೈರಸ್ ನಿಯಂತ್ರಣಕ್ಕೆ ಎಸಿ, ಎರಡನೇ ಸ್ಥರ, ಮೂರನೇ ಸ್ಥರದ ಕೋಚ್ ಗಳಲ್ಲಿ ಬೆಡ್ ಶೀಟ್ ಹಾಗೂ ತಲೆದಿಂಬು ನೀಡುವುದಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಈಗ ಎಲ್ಲವೂ ಯಥಾವತ್ತಾಗಿ ಆರಂಭವಾಗಿದ್ದು, ಬೆಡ್ ಶೀಟ್ ಹಾಗೂ ದಿಂಬು ವಿತರಣೆ ಮಾತ್ರ ಆರಂಭವಾಗಿಲ್ಲ. ಈಗಾಗಲೇ ವಿತರಣೆ ಮಾಡುವ ಬಗ್ಗೆ ಮಾಹಿತಿ ನೀಡಿದೆ. ಆದರೆ ವಾಸ್ತವ ಅಂಶ ಅಂದರೆ ಎಸಿ ಹಾಗೂ ಸ್ಲೀಪರ್ ಕೋಚ್ ಗಳಲ್ಲಿ ಬೆಡ್ ಶೀಟ್ ಹಾಗೂ ದಿಂಬು ಕೊಡುತ್ತಾರೆ ಎಂದುಕೊಂಡು ದೂರದ ಪ್ರಯಾಣಕ್ಕೆ ಆಗಮಿಸಿದ ಪ್ರಯಾಣಿಕರು ಸೌಲಭ್ಯ ಸಿಗದೇ ಪರದಾಡುವಂತಾಗಿದೆ. ಸೂಕ್ತ ಮಾಹಿತಿ ನೀಡದೇ ಇರುವುದಕ್ಕೆ ರೈಲ್ವೆ ಸೇವೆಯ ವಿರುದ್ಧ ಜನರು ಅಸಮಾಧಾನ ಹೊರ ಹಾಕುವಂತಾಗಿದೆ.

ಇನ್ನೂ ಕಾಮಗಾರಿ ಹೆಸರಿನಲ್ಲಿ ರೈಲ್ವೆಯು ರಾತ್ರಿ ಸಂಚರಿಸುವ ಬಹುತೇಕ ರೈಲುಗಳ ಸಮಯದಲ್ಲಿ ಏರುಪೇರು ಮಾಡಿದೆ. ರಾಣಿಚೆನ್ನಮ್ಮ, ಧಾರವಾಡ ಮೈಸೂರು ಎಕ್ಸ್ ಪ್ರೆಸ್‌ ಸೇರಿದಂತೆ ಬಹುತೇಕ ರಾತ್ರಿ ಸಂಚರಿಸುವ ರೈಲುಗಳ ಸಮಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

Edited By : Manjunath H D
Kshetra Samachara

Kshetra Samachara

26/03/2022 03:48 pm

Cinque Terre

65.7 K

Cinque Terre

7

ಸಂಬಂಧಿತ ಸುದ್ದಿ