ಪಟ್ಟಣಕ್ಕೆ ಹೆಚ್ಚಿನ ಇನ್ನೂ 500 ಮನೆ ಹಾಗೂ ಗ್ರಾಮೀಣ ಭಾಗಗಳಿಗೆ 1300 ಮನೆಗಳನ್ನು ಮಂಜೂರು ಮಾಡುತ್ತೇನೆ ಬಡವರನ್ನು ಗುರುತಿಸಿ ಮನೆ ನೀಡಿ ಆದ್ರೇ ಯಾವ ಪ.ಪಂ ಗ್ರಾಪಂ ಸದಸ್ಯರು ಕಾಸು ಕೇಳಬೇಡ್ರಣ್ಣ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಅವರು ಕುಂದಗೋಳ ಪಟ್ಟಣದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಪಿಎಂ ಆವಾಸ್ ಯೋಜನೆಯಡಿ 235 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತ ಶಾಸಕಿ ಕುಸುಮಾವತಿ ಶಿವಳ್ಳಿಯವರ ಅನುಪಸ್ಥಿತಿಯನ್ನು ಕಂಡು "ರಾಜಕೀಯ ನಿಂತ ನೀರಲ್ಲಾ ಹರಿಯುವ ನೀರು, ನಾನು ಶಿವಳ್ಳಿ ಮೊದಲು ಒಂದೇ ಪಕ್ಷದಲ್ಲಿ ಇದ್ದವರು ಎಂದರು.
ಚುನಾವಣೆ ಇದ್ದಾಗ ಒಂದು ತಿಂಗಳು ಮಾತ್ರ ಪಕ್ಷ ಬೇಧ ಇರಲಿ, ಉಳಿದ ದಿನಗಳಲ್ಲಿ ಎಲ್ಲರೂ ಸೇರಿ ಅಭಿವೃದ್ಧಿ ಕೆಲಸ ಮಾಡೋಣ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ಧಾರವಾಡ ಜಿಲ್ಲೆಗೆ ಒಟ್ಟು 7642 ಮನೆ ನೀಡಲಾಗಿದೆ, ಒಂದು ಮನೆ 2.70 ಲಕ್ಷ 3.70 ಲಕ್ಷ ವೆಚ್ಚದಲ್ಲಿ ಇರಲಿದೆ, ಮನೆಯನ್ನು ಕೊಳಗೇರಿ ನಿವಾಸಿಗಳು ಇರುವಲ್ಲೇ ಕಟ್ಟಲಾಗುತ್ತದೆ ಹಾಗೂ ಹಣ ನೇರ ಅವರ ಖಾತೆಗೆ ಬರುತ್ತದೆ ಇದು ಮೋದಿ ಸರ್ಕಾರದ ಕೆಲಸ ಎಂದು, ಬಿಜೆಪಿ ಮುಖಂಡ ಎಂ.ಆರ್.ಪಾಟೀಲ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ ಮಾತು ಜೋಶಿಯವರ ಬಾಯಲ್ಲಿ ಕೇಳಿ ಬಂದವು.
ರಾಜ್ಯ ಸಚಿವರು, ಕೇಂದ್ರ ಮಂತ್ರಿಗಳನ್ನು ಬೈಕ್ ರ್ಯಾಲಿ ಮೂಲಕ ಭಾಜಪ ಕಾರ್ಯಕರ್ತರ ಕರೆತಂದರೇ, ವೇದಿಕೆ ಮೇಲೆ ಸಚಿವ ವಿ.ಸೋಮಣ್ಣ ಹಾಗೂ ಪ್ರಲ್ಹಾದ ಜೋಶಿ ಅವರಿಗೆ ಸನ್ಮಾನ ಮಾಡಲು ಜನ ಮುಗಿಬಿದ್ದರು, ಸ್ವತಃ ವಸತಿ ಸಚಿವ ವಿ. ಸೋಮಣ್ಣನವರೇ ಮೈಕ್ ಬಳಿ ಬಂದು ಜನರನ್ನು ಕೆಳಗಿಳಿಸಿದರು.
ಈ ಸಂದರ್ಭದಲ್ಲಿ ಸರ್ವ ಬಿಜೆಪಿ ಮುಖಂಡರು ಪ.ಪಂ, ಸದಸ್ಯರು, ಎಲ್ಲ ಇಲಾಖೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
Kshetra Samachara
19/03/2022 03:47 pm