ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತ್ಯಾಜ್ಯ ವಿಲೇವಾರಿಯಲ್ಲಿ ಅವ್ಯವಸ್ಥೆ: ಗಮನಕ್ಕೆ ಬಂದಿದ್ದರೂ ಜಾರಿಯಾಗಿಲ್ಲ ಕ್ರಮ...!

ಪಬ್ಲಿಕ್ ನೆಕ್ಸ್ಟ್ ಸೀರೀಸ್-3

ಹುಬ್ಬಳ್ಳಿ: ಅದು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ಪಾಲಿಕೆ. ಏನೆನೋ ಯೋಜನೆ ಜಾರಿಗೆ ತಂದು ಸ್ಮಾರ್ಟ್ ಆಗುತ್ತಿರುವ ಈ ಪಾಲಿಕೆಯಲ್ಲಿ ಬಹುದೊಡ್ಡ ಅವ್ಯವಸ್ಥೆ ತಲೆದೋರಿದೆ. ಇಷ್ಟು ದೊಡ್ಡ ಸಮಸ್ಯೆ ಉದ್ಭವಿಸಿದ್ದರೂ ಕ್ರಮಕ್ಕೆ ಮಾತ್ರ ಅಧಿಕಾರಿಗಳು ಮೀನಾಮೇಷ ಏಣಿಸುತ್ತಿದ್ದಾರೆ. ಅರೇ ಏನಿದು ಸಮಸ್ಯೆ ಅಂತೀರಾ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಮತ್ತೊಂದು ಸ್ಫೋಟಕ ಮಾಹಿತಿ.

ಹೌದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣೆ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ಹೆಸರಲ್ಲಿ ಸರ್ಕಾರದ ಹಣವನ್ನು ಪೋಲು ಮಾಡುತ್ತಿದೆ. ಜನಪರ ಕಾಳಜಿ ತೋರುವ ಪಾಲಿಕೆ ಜನರ ಆರೋಗ್ಯಕ್ಕೆ ಮಾರಕವಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಿತ್ಯ ನಗರದ ವಿವಿಧ ವಾರ್ಡ್ ಗಳಿಂದ ಸಂಗ್ರಹಿಸಿದ ಹತ್ತಾರು ಟನ್ ಕಸವನ್ನು ಇಲ್ಲಿ ತಂದು ಸುರಿಯುತ್ತೆ. ಹೀಗೆ ಸುರಿದ ಕಸವನ್ನು ಬೇರ್ಪಡಿಸಿ, ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಹಾಗಂತ ಮಹಾನಗರ ಪಾಲಿಕೆ ಘನ ತ್ಯಾಜ್ಯ ವಿಲೇವಾರಿಯ ವೈಜ್ಞಾನಿಕ ಮಾಡುತ್ತಿದೆಯಾ ಅಂತ ನೋಡಿದ್ರೆ ನಗ್ನ ಸತ್ಯ ಕಣ್ಣಿಗೆ ರಾಚುತ್ತೆ. ಕೇವಲ ದಾಖಲೆಗಳಲ್ಲಿ ಮಾತ್ರ ಘನ ತ್ಯಾಜ್ಯ ನಿರ್ವಹಣೆಯ ನಾಟಕವಾಡುತ್ತಿದೆ. ವಾಸ್ತವದಲ್ಲಿ ಅದ್ಯಾವುದೂ ಇಲ್ಲಿ ನಡೆಯುತ್ತಿಲ್ಲ. ಅಲ್ಲದೇ ಜನರು ಸಾಕಷ್ಟು ಬಾರಿ ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದರೂ ಆಯುಕ್ತರು ಮಾತ್ರವೇ ಹೇಳೋದು ಹೀಗೆ.

ಇನ್ನೂ ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ. ಇದರಿಂದ ಗೊಬ್ಬರ ತಯಾರಿಸಿ ರೈತರಿಗೆ ಮಾರಾಟ ಮಾಡಿ ಆದಾಯ ಗಳಿಸಿದೆ ಎಂದು ಪಾಲಿಕೆ ಆಯುಕ್ತರು ಹೇಳುತ್ತಾರೆ. ಆದರೆ ಇಲ್ಲಿ ಸಂಗ್ರಹಿಸಿದ ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರು ಯಾರು ಎಂಬುವಂತ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವ ಭರವಸೆಯನ್ನು ಆಯುಕ್ತರು ನೀಡಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಹಣವನ್ನು ಹೀಗೆ ಅರ್ಥವಿಲ್ಲದೇ ವ್ಯರ್ಥ ಮಾಡುವುದಕ್ಕೆ ಕಡಿವಾಣ ಬೀಳಬೇಕಿದೆ. ಜನರ ಜೀವಕ್ಕೆ ಮಾರಕವಾದ ತ್ಯಾಜ್ಯ ಸುಡುವ ಕಾರ್ಯಕ್ಕೆ ಬ್ರೇಕ್ ಹಾಕಲು ಆಯುಕ್ತರು ನಿರ್ಧಾರ ಕೈಗೊಳ್ಳುವವರೇ ಕಾದು ನೋಡಬೇಕಿದೆ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Nagesh Gaonkar
Kshetra Samachara

Kshetra Samachara

14/03/2022 11:04 pm

Cinque Terre

27.58 K

Cinque Terre

1

ಸಂಬಂಧಿತ ಸುದ್ದಿ