ಹುಬ್ಬಳ್ಳಿ: ಅದು ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವ ಸದುದ್ದೇಶದಿಂದ ಜಾರಿ ಮಾಡಿದ್ದ ಯೋಜನೆ. ಆದರೆ ಈ ಯೋಜನೆ ಲಾಭ ಪಡೆಯಬೇಕೆಂದರೇ ನೀವು ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕು. ನಾವು ಇದನ್ನು ಕೇವಲ ಮಾತಿಗೆ ಹೇಳ್ತಾ ಇಲ್ಲ. ಆದ್ರೆ ಪರಿಸ್ಥಿರಿ ಹಾಗಿದೆ.
ಯೆಸ್..ಸರ್ಕಾರ ಸಾರ್ವಜನಿಕರ ಯಾವುದೇ ತುರ್ತು ಸಮಸ್ಯೆಗಳಿದ್ದರೂ ತಕ್ಷಣವೇ ಸ್ಪಂದಿಸಲು ERSS 112 ಸೇವೆಯನ್ನು ಜಾರಿ ಮಾಡಿದೆ. ಯೋಜನೆ ಏನೋ ಚೆನ್ನಾಗಿಯೇ ಇದೆ. ಆದರೆ ಇದರ ಲಾಭ ಪಡೆಯುವಲ್ಲಿ ನೀವು ಹೈರಾಣಾಗುವುದು ಖಂಡಿತ. ಯಾಕಂದ್ರೆ ಹುಬ್ಬಳ್ಳಿಯಲ್ಲಿ ನೀವು ಕರೆ ಮಾಡಿದರೆ ಅದು ಸ್ಥಳಿಯ ಕಂಟ್ರೋಲ್ ರೂಮ್‌ಗೆ ಹೋಗುವುದಿಲ್ಲ. ಬದಲಾಗಿ ಬೆಂಗಳೂರಿನ ಕೇಂದ್ರ ಕಚೇರಿಗೆ ಹೋಗಿ ಅಲ್ಲಿಂದ ಪುನಃ ಹುಬ್ಬಳ್ಳಿಗೆ ಕನೆಕ್ಟ್ ಆಗುತ್ತೆ. ಅಷ್ಟು ಹೊತ್ತಿಗೆ ಸುಮಾರು ಹೊತ್ತು ಕಳೆದಿರುತ್ತೆ. ಇದರಿಂದ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಸೇವೆ ದೊರೆಯದೇ ಪರದಾಡುವಂತಾಗಿದೆ. ಈ ಸಮಸ್ಯೆ ಅನುಭವಿಸಿದ ಜನರು ಏನು ಹೇಳ್ತಾರೆ ಕೇಳಿ.
ಇನ್ನು ತುರ್ತು ಸಂದರ್ಭದಲ್ಲಿ ಪೊಲೀಸ್ ಸೇವೆ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸಲು 112 ಸೇವೆಯನ್ನು ಒದಗಿಸಲಾಗಿದೆ. ಆದರೆ ಹೋಮ್ ಮಿನಿಸ್ಟರ್ ಸಾಹೇಬರು ಹಾಗೂ ಸರ್ಕಾರ ಇದರ ಬಗ್ಗೆ ಕಾಳಜಿ ವಹಿಸದೇ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ಮಾಡಿದ್ದು, ಜನರ ಸಮಸ್ಯೆಗೆ ತಕ್ಷಣವೇ ಸ್ಪಂದನೆ ಸಿಗದಂತೆ ಮಾಡಿದೆ.
ಒಟ್ಟಿನಲ್ಲಿ ಸರ್ಕಾರದ ಯೋಜನೆ ಈ ರೀತಿಯಾಗಿ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಕೈಗೆಟುಕದೇ ನಿರಾಶೆ ಮೂಡುವಂತಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಯೋಜನೆಯ ಸಾಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
-ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
11/03/2022 08:05 am