ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೊಲೀಸ್ ಇಲಾಖೆಯನ್ನ ಪೇಚಾಟಕ್ಕೆ ಸಿಲುಕಿಸಿದ ಕಾಮಗಾರಿ: ಯಾವಾಗ ಮುಗಿಯುತ್ತೋ ?

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಏಕಕಾಲಕ್ಕೆ ಹಲವಾರು ಕಾಮಗಾರಿ ನಡೆಯುತ್ತಿದ್ದು, ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೊದಲು ಪ್ರಮುಖ ರಸ್ತೆಯಲ್ಲಿ ಮಾತ್ರ ಇರುತ್ತಿದ್ದ ಟ್ರಾಫಿಕ್ ಈಗ ಎಲ್ಲ ರಸ್ತೆಗಳಲ್ಲಿಯೂ ಕಾಣಿಸಿಕೊಂಡಿದ್ದು, ಕಮೀಷನರೇಟ್ ಪೊಲೀಸರಿಗೆ ಟ್ರಾಫಿಕ್ ನಿರ್ವಹಣೆಯೇ ದೊಡ್ಡ ತಲೆನೋವಾಗಿದೆ.

ಹೌದು.ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ ಪ್ಲೈಓವರ್ ಕಾಮಗಾರಿಯಿಂದ ವಾಹನ ಸವಾರರಿಗೆ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ಎಲ್ಲೆಂದರಲ್ಲಿ ಕಾಮಗಾರಿ ನಡೆಯುತ್ತಿದ್ದು, ಜನರ ಓಡಾಟಕ್ಕೆ ಸೂಕ್ತ ಮಾರ್ಗದ ವ್ಯವಸ್ಥೆ ಇಲ್ಲದಂತಾಗಿದೆ. ವಾಣಿಜ್ಯನಗರಿ ಹುಬ್ಬಳ್ಳಿಯನ್ನು ಸ್ಮಾರ್ಟ್ ಮಾಡಲು ಬಂದಿರುವ ಸ್ಮಾರ್ಟ್ ಸಿಟಿ ಯೋಜನೆ ಒಂದು ಕಡೆ ಆದರೆ, ಮತ್ತೊಂದು ಕಡೆಯಲ್ಲಿ ಪ್ಲೈಓವರ್ ಕಾಮಗಾರಿ. ಇದರಿಂದ ದಿನಕ್ಕೊಂದು ಮಾರ್ಗ ಬದಲಾವಣೆ, ಕ್ಷಣಕ್ಕೊಂದು ನಿರ್ಧಾರದಿಂದ ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ಟ್ರಾಫಿಕ್ ನಿರ್ವಹಣೆ ಮಾಡುವುದೇ ದೊಡ್ಡ ತಲೆನೋವಾಗಿದೆ. ಕಿಕ್ಕಿರಿದ ರಸ್ತೆಗಳ ಮಧ್ಯದಲ್ಲಿಯೇ ವಾಹನ ಸವಾರರು ಪರದಾಡುತ್ತಿದ್ದು, ಇದನ್ನು ನಿರ್ವಹಿಸುವ ಜವಾಬ್ದಾರಿ ಪೋಲಿಸರದ್ದಾಗಿದೆ.

ಇನ್ನೂ ಒಂದೆಡೆಗೆ ಛೋಟಾ ಮುಂಬೈನಲ್ಲಿ ಕ್ರೈಂ ಪ್ರಕರಣ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಸಿಎಂ ತವರು ಜಿಲ್ಲೆ ಹಿನ್ನೆಲೆ ವಿವಿಐಪಿ ಓಡಾಟ ಹೆಚ್ಚಾಗಿರುವುದರಿಂದ ಹೆಚ್ಚಿನ‌ ಸಮಯ ಬಂದೋಬಸ್ತ್, ಸುಗಮ‌ ಸಂಚಾರಕ್ಕೆ ವ್ಯವಸ್ಥೆ ಮಾಡುವುದಕ್ಕೆ ಹೆಣಗಾಡುತ್ತಿದ್ದಾರೆ. ಇವೆಲ್ಲ ಜವಾಬ್ದಾರಿ ಜೊತೆಗೆ ಈಗ ಟ್ರಾಫಿಕ್ ನಿರ್ವಹಣೆಯೇ ಪೊಲೀಸ್ ಇಲಾಖೆಗೆ ತಲೆನೋವಾಗಿದೆ. ಅಲ್ಲದೇ ಫ್ಲೈ ಓವರ್ ಕಾಮಗಾರಿ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿ ವರ್ಗ ಹಾಗೂ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ರವಾನೆ ಮಾಡದೇ ಇರುವುದರಿಂದ ಜನರು ಓಡಾಡಲು ಹರಸಾಹಸ ಪಡುವಂತಾಗಿದೆ.

Edited By : Nagesh Gaonkar
Kshetra Samachara

Kshetra Samachara

03/03/2022 09:04 am

Cinque Terre

51.23 K

Cinque Terre

5

ಸಂಬಂಧಿತ ಸುದ್ದಿ