ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮನೆ ಮನೆಗೆ ಬಂತೂ ಕರ ಪಾವತಿ ಅಭಿಯಾನ: ಪಾಲಿಕೆಯ ವಿನೂತನ ಕಾರ್ಯ

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅವಳಿನಗರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಅಲ್ಲದೇ ಪಾಲಿಕೆಗೆ ಮಾತ್ರ ಕರ ಸಂಗ್ರಹಿಸುವುದೇ ದೊಡ್ಡ ಸವಾಲಾಗಿದ್ದು, ಈಗ ವಿನೂತನ ಅಭಿಯಾನದತ್ತ ಮಹಾನಗರ ಪಾಲಿಕೆ ಮುಂದಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿಯಲ್ಲಿ ಅಭಿಯಾನದ ಮೂಲಕ ಮನೆ ಮನೆಗೆ ಹೋಗಿ ಕರ ಪಾವತಿಸುವ ಕಾರ್ಯಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಲಯ ಕಚೇರಿ 09ರಲ್ಲಿ ಬರುವ ಜಿಗಳೂರು ಕಲ್ಯಾಣ ಮಂಟಪದಲ್ಲಿ ಅಭಿಯಾನದ ಮೂಲಕ ಸಹಾಯಕ ಆಯುಕ್ತರಾದ ಸಿದ್ಧಗೊಂಡ ಅವರ ನೇತೃತ್ವದಲ್ಲಿ ಕರ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.

ಇನ್ನೂ ಈಗಾಗಲೇ ಸುಮಾರು ವ್ಯವಸ್ಥೆ ಮಾಡಿದರು ಕೂಡ ಬಹುತೇಕ ಕಡೆಗಳಲ್ಲಿ ಕರ ಪಾವತಿಸುವ ಕಾರ್ಯ ಸಂಪೂರ್ಣಗೊಳ್ಳುತ್ತಿಲ್ಲ ಈ ನಿಟ್ಟಿನಲ್ಲಿ ಪಾಲಿಕೆ ಸಹಾಯಕ ಆಯುಕ್ತರು ಇಂತಹದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

23/02/2022 02:52 pm

Cinque Terre

22.48 K

Cinque Terre

9

ಸಂಬಂಧಿತ ಸುದ್ದಿ