ಕುಂದಗೋಳ : ಕಳೆದ ಹಲವಾರು ವರ್ಷಗಳಿಂದ ಕುಂದಗೋಳ ಪಟ್ಟಣದ ಎಪಿಎಂಸಿ ಆವರಣದ ಕೃಷಿಕ ಸಮಾಜದ ಬಾಡಿಗೆ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ನೂತನ ಕಟ್ಟಡಕ್ಕೆ ಪಾದಾರ್ಪಣೆ ಮಾಡಿದೆ.
ಕುಂದಗೋಳ ಪಟ್ಟಣದ ಕಾಳಿದಾಸ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಉದ್ಘಾಟನೆ ಭಾಗ್ಯ ಕಾಣದೆ ಇರುವ ಬಗ್ಗೆ ಬಳಿಕ ಉದ್ಘಾಟನೆಗೊಂಡು ಮೂರು ತಿಂಗಳು ಗತಿಸಿದರೂ ಇಲಾಖೆಯ ಕರ್ತವ್ಯಕ್ಕೆ ಬಾಗಿಲು ತೆರೆಯದಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಲುಪುವಂತೆ ಪಬ್ಲಿಕ್ ನೆಕ್ಸ್ಟ್ ಸತತ ವರದಿ ಬಿತ್ತರಿಸಿತ್ತು.
ರೈತರು ದೂರದ ಎಪಿಎಂಸಿ ವರೆಗೆ ಸಹಾಯಕ ಕೃಷಿ ನಿರ್ದೇಶಕ ಕಚೇರಿಗಾಗಿ ಓಡಾಡುವ ಪರಿಸ್ಥಿತಿ ಹಾಗೂ ಕಟ್ಟಡದ ಸುತ್ತ ನಿರ್ವಹಣೆಯಿಲ್ಲದೆ ಕಸ ಬೆಳೆದ ಬಗ್ಗೆಯೂ ವರದಿ ಮಾಡಿತ್ತು.
ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಇಂದು ಸಹಾಯಕ ಕೃಷಿ ನಿರ್ದೇಶಕ ಕಾರ್ಯಾಲಯ ನೂತನ ಕಟ್ಟಡಕ್ಕೆ ಪಾದಾರ್ಪಣೆ ಮಾಡಿದ್ದು ಅಧಿಕಾರಿಗಳು ಈಗಾಗಲೇ ನೂತನ ಕಟ್ಟಡದಲ್ಲಿ ಕರ್ತವ್ಯ ಆರಂಭಿಸಿದ್ದಾರೆ. ಇದು ರೈತರಲ್ಲಿ ಸಂತೋಷ ತಂದಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
19/01/2022 05:36 pm