ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ಲೈ ಓವರ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್: ಟ್ರಾಫಿಕ್ ಸಮಸ್ಯೆಗೆ ಬೀಳಲಿದೆ ಬ್ರೇಕ್...!

ಹುಬ್ಬಳ್ಳಿ: ಅದು ಈ ಭಾಗದ ಜನ ದಶಕದ ಕನಸು. ಆದರೆ ಆರಂಭದಲ್ಲೆ ಅದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಖುದ್ದು ಸ್ಥಳಿಯರೇ ಕೆಲ ನೂನ್ಯತೆಗಳನ್ನು ಹೇಳಿದ್ದರಿಂದ, ತಜ್ಞರ ಸಮಿತಿ ರಚನೆ ಮಾಡಲಾಗಿತ್ತು. ಸದ್ಯ ಮತ್ತೊಮ್ಮೆ ಸಮಿತಿ ಯೋಜನೆಗೆ ಜೈ ಎಂದಿದೆ‌, ಹಾಗಿದ್ದರೆ ಏನ್ ಆ ಮಹಾತ್ವಕಾಂಕ್ಷಿ ಯೋಜನೆ‌,ಆರಂಭದಲ್ಲಿ ಯಾಕೆ ಗದ್ದಲಕ್ಕೆ ಕಾರಣವಾಯ್ತು ಅಂತೀರಾ ಈ ಸ್ಟೋರಿ ನೋಡಿ..

ಉತ್ತರ ಕರ್ನಾಟಕ ಭಾಗದ ಹೃದಯಭಾಗ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಇನ್ನೇನೂ ಫ್ಲೈಓವರ್ ನಿರ್ಮಾಣ ಕಾಮಗಾರಿ ಶುರುವಾಯಿತು ಎನ್ನುವಾಗಲೇ, ವಿಘ್ನ ಎದುರಾಗಿತ್ತು. ಯಾಕೆಂದರೆ ಹರಿಯಾಣ ಮೂಲದ ಜಾಂಡು ಕನ್ಸಟ್ರಕ್ಷನ್ ಕಂಪನಿ ಸರಿಯಾಗಿ ಫ್ಲ್ಯಾನ್ ಮಾಡದೇ ಯೋಜನೆಯ ದಿಕ್ಕ‌ನ್ನೆ ತಪ್ಪಿಸಿದೇ ಎಂದು ಸ್ಥಳೀಯರು ಆರೋಪಿಸಿದ್ದರು. ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಶಾಸಕ ಅರವಿಂದ ಬೆಲ್ಲದ್ ನೈತೃತ್ವದಲ್ಲಿ, ಪೊಲೀಸ್ ಆಯುಕ್ತರು, ಐಐಟಿ ಪ್ರೋಪೆಸರ್ ಕೆ ಎಲ್ ಇ ಕುಲಪತಿಗಳು ಸೇರಿದಂತೆ 13 ಜನರ ಸಮಿತಿ ರಚನೆ ಯಾಗಿತ್ತು. ಆ ಸಮಿತಿ ಸುಮಾರು ಎರಡೂ ತಿಂಗಳ ಕಾಲ ಸಾಕಷ್ಟು ಚರ್ಚಿಸಿ, ಪರೀಶಿಲಿಸಿ ಅಧ್ಯಯನ ನಡೆಸಿರುವ ಸಮೀತಿ ಕೊನೆಗೂ ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಭವಿಷ್ಯದಲ್ಲಿ ಟ್ರಾಪಿಕ್ ಕಂಟ್ರೋಲ್ ಮಾಡೋಕೆ ಫ್ಲೈಓವರ್ ಅಗತ್ಯತೆ ಇದೆ ಎನ್ನುವುದನ್ನು ತನ್ನ ವರದಿಯಲ್ಲಿ ಹೇಳಿದೆ.

ಅಂದಾಜು 200 ಕೋಟಿ ವೆಚ್ಚದಲ್ಲಿ ಸದ್ಯ ಫ್ಲೈ ಓವರ್ ನಿರ್ಮಾಣಕ್ಕೆ ಕಳೆದ ವರ್ಷ ಕೇಂದ್ರ ಒಪ್ಪಿಗೆ ಸೂಚಿಸಿತ್ತು. ಮೊದಲ ಹಂತವಾಗಿ 3.2 ಕಿಲೋ ಮೀಟರ್ ಉದ್ದದ ಮೇಲು ಸೇತುವೆಗೆ ಅಸ್ತು ಅಂದಿತ್ತು.ಆದರೆ ಗದಗ ರಸ್ತೆಯಿಂದ ನಗರದ ಎಂಟ್ರಿಯಾಗುವಾಗ ಸ್ಥಳ,ಹೊಸುರು ಬಳಿಯ ಎಂಡ್ ಪಾಯಿಂಟ್, ಸೇರಿದಂತೆ ಕೆಲವೊಂದು ಕಡೆಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ‌ಸದ್ಯ ತಜ್ಞರ ಸಮಿತಿ ಸಲ್ಲಿರುವ ವರದಿಯಲ್ಲಿ ಹೊಸುರು ಬಳಿ ಎರಡೂ ಬಿಆರ್‌ಟಿಎಸ್ ಬಸ್ ಸ್ಟಾಪ್ ಗಳನ್ನ ನೆಲಸಮ‌ ಮಾಡಿ ಅಲ್ಲಿ ಪಿಲ್ಲರ್ ಗಳನ್ನ ಹಾಕೋದು. ಮತ್ತು ಗದಗ ರಸ್ತೆಯಿಂದ ಶುರುವಾಗೋ ಕಾಮಗಾರಿಯನ್ನ ಪಾಲಿಕೆ ಕಚೇರಿ ಮುಂಭಾಗದಿಂದ ಶುರು ಮಾಡಲು ಸಮೀತಿ ಶಿಫಾರಸ್ಸು ಮಾಡಿದೆ. ಮೊದಲಿದ್ದ ಉದ್ದಕ್ಕಿಂದ ಅರ್ಧ ಕಿಲೋ ಮೀಟರ್ ನಷ್ಟು ವ್ಯಾಪ್ತಿಯನ್ನು ಕಡಿತಗೊಳಿಸಿ, ಮಾರುಕಟ್ಟೆ ಪ್ರದೇಶಕ್ಕೆ ಹೋಗೋಕೆ ಅನೂಕುಲ‌ ಮಾಡಿಕೊಡಲಾಗಿದೆಯಂತೆ.

ಒಟ್ಟಿನಲ್ಲಿ ನಮ್ಮ ನಗರದ ಸಂಚಾರ ದಟ್ಟಣೆ ಕಡಿಮೆಯಾಗುತ್ತೆ. ಚೆನ್ನಮ್ಮ ವೃತ್ತದ ಅಂದ ಹೆಚ್ಚಾಗುತ್ತೆ ಎಂದು ಕನಸು ಕಾಣುತ್ತಿದ್ದ ಜನರಿಗೆ ಅದ್ಯಾವಗ ಕನಸು ನಿಜವಾಗುತ್ತೋ ಕಾದು ನೊಡಬೇಕು..

Edited By : Manjunath H D
Kshetra Samachara

Kshetra Samachara

23/11/2021 04:56 pm

Cinque Terre

30.18 K

Cinque Terre

5

ಸಂಬಂಧಿತ ಸುದ್ದಿ