ಕುಂದಗೋಳ : ಇಲ್ಲೋಬ್ಬ ವ್ಯಕ್ತಿ ಮನೆಯ ಕರೆಂಟ್ ಬಿಲ್ ಬರೋಬ್ಬರಿ ಲಕ್ಷ ರೂಪಾಯಿ ಸನಿಹ ನೀಡಿದ ಹೆಸ್ಕಾಂ ಇಲಾಖೆ ಅಧಿಕಾರಿಗಳು ಆ ವ್ಯಕ್ತಿಯ ಮನೆಯ ವಿದ್ಯುತ್ ಮೀಟರ್ ದುರಸ್ತಿ ಬಗ್ಗೆ ಅಲಕ್ಷ್ಯ ತೋರಿದ್ದಾರೆ.
ಇಂತಹದ್ದೊಂದು ಘಟನೆ ನಡೆದಿರೋದೆ ಕುಂದಗೋಳ ತಾಲೂಕಿನ ಚಿಕ್ಕನೇರ್ತಿ ಗ್ರಾಮದಲ್ಲಿ ಸೋಮಪ್ಪ ಬಡಿಗೇರ್ ಎಂಬುವವರ ಮನೆಯ ವಿದ್ಯುತ್ ಮೀಟರ್ 2013ರಲ್ಲೇ (ಮೀಟರ್ ನಾಟ್ ರಿಸ್ಪಾಂಡಿಂಗ್) ಎಂಬ ದೋಷ ಒಳಗೊಂಡಿದ್ರೂ ಅಲ್ಲಿಂದ ಇಲ್ಲಿಯವರೆಗೆ ಅಂದ್ರೇ 2021 ರವರೆಗೆ ಈ ಹೆಸ್ಕಾಂ ಇಲಾಖೆ ಅಧಿಕಾರಿಗಳು ಮೀಟರ್ ಬದಲಾಯಿಸಿ ಹೊಸ ಮೀಟರ್ ಅಳವಡಿಸಿ ಮಾಸಿಕ ಬಳಕೆ ಮಾಡಿದ ವಿದ್ಯುತ್ ಬಿಲ್ ನಿಡೋದು ಬಿಟ್ಟು ಪ್ರತಿ ತಿಂಗಳು ಸರಾಸರಿ ಐದು ವರ್ಷ 227 ಯೂನಿಟ್ ವಿದ್ಯುತ್ ಬಳಸಿದ್ದಾರೆ ಎಂಬ ಬಿಲ್ ನೀಡಿದ್ದು, ಈಗ ಸೋಮಪ್ಪ ಬಡಿಗೇರ್ ಒಟ್ಟು ವಿದ್ಯುತ್ ಬಿಲ್ ಲಕ್ಷ ಸನಿಹ ಅಂದ್ರೇ 93344 ತಲುಪಿದೆ.
ಆದ್ರೇ ಸೋಮಪ್ಪ ಬಳಸಿರೋದು ಮಾಸಿಕ 22 ರಿಂದ 28 ಯೂನಿಟ್ ಅದರಲ್ಲೂ ಇವರು ಭಾಗ್ಯಜ್ಯೋತಿ ಫಲಾನುಭವಿ.
ಈ ಹೆಸ್ಕಾಂ ಇಲಾಖೆಗೆ ಸೋಮಪ್ಪ ಅವರ ಮಗ ಅಧಿಕಾರಿಗಳಿಗೆ ಮೀಟರ್ ಬದಲಾಯಿಸುವಂತೆ ಅದೆಷ್ಟೇ ಸಾರಿ ಮನವಿ ಮಾಡಿದ್ರೂ, ಅಧಿಕಾರಿಗಳು ಹೊಸ ಮೀಟರ್ ಅಳವಡಿಸಿದೇ ಸರಾಸರಿ ಬಿಲ್ ನೀಡುತ್ತಾ ಬಂದಿದ್ದು, ಒಮ್ಮೆ ಮೀಟರ್ ಬದಲಾಯಿಸಿ ಎಂದಾಗ ವಿದ್ಯುತ್ ಸಂಪರ್ಕ ಸಹಿತ ಕಟ್ ಮಾಡಿದ್ದಾರೆ, ಮತ್ತೋಮ್ಮೆ ಮನವಿ ಮೂಲಕ ಸೋಮಪ್ಪ ಅವರ ಮಗ ಮೀಟರ್ ಬದಲಾಯಿಸಿ ಎಂದಾಗ ಮೀಟರ್ ಬದಲಾಯಿಸಿದ ಇಲಾಖೆ ಅಧಿಕಾರಿಗಳು ಹಳೇ ವಿದ್ಯುತ್ ಬಿಲ್ ಅಸಲು ಬಡ್ಡಿ ಸೇರಿ ಪ್ರಸಕ್ತ 93344 ರೂಪಾಯಿ ವಿದ್ಯುತ್ ಬಿಲ್ ಕಟ್ಟುವಂತೆ ಒತ್ತಾಯ ಮಾಡಿ ಈಗಲೂ ಸಹ ಮನೆ ಕರೆಂಟ್ ಕಟ್ ಮಾಡಿ ಸೋಮಪ್ಪನಿಗೆ ಕತ್ತಲು ಮನೆ ವಾಸದ ಭಾಗ್ಯ ಕರುಣಿಸಿದ್ದಾರೆ.
ಒಟ್ಟಾರೆ ತನ್ನದೆ ಲೋಪ ಇದ್ದರೂ ಸಹ ಈ ಹೆಸ್ಕಾಂ ಇಲಾಖೆ ಅಧಿಕಾರಿಗಳು ಫಲಾನಭವಿ ಬಳಸದೇ ಇರೋ ವಿದ್ಯುತ್'ಗೆ ಸರಾಸರಿ ಬಿಲ್ ನೀಡಿ ಈಗ ಅದಕ್ಕೆ ಬಡ್ಡಿ ಹಾಕಿ ಲಕ್ಷ ಸನಿಹ ಹಣ ಪಾವತಿ ಮಾಡಿ ಎಂದ್ರೇ ಬಡವರು ಎಲ್ಲಿಗೆ ಹೋಗೋದು ? ನೀವೆ ಹೇಳಿ ?
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
18/11/2021 11:37 am