ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕೃಷಿ ಸಚಿವರು ಉದ್ಘಾಟಿಸಿದ ಕಟ್ಟಡ ಉಪಯೋಗಕ್ಕಿಲ್ಲಾ !

ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

ಕುಂದಗೋಳ: ಆರಂಭದಲ್ಲಿ ಕಟ್ಟಡ ತಯಾರಾದ್ರೂ ಉದ್ವಾಟನಾ ಭಾಗ್ಯ ಕಾಣದೆ ಇದ್ದ ನೂತನ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಟ್ಟಡಗಳನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಅಕ್ಟೋಬರ್ 1 ರಂದೇ ಉದ್ಘಾಟನೆ ಮಾಡಿದ್ದರೂ ಇಂದಿಗೂ ಅಧಿಕಾರಿಗಳು ಹಾಗೂ ಜನರ ಉಪಯೋಗಕ್ಕೆ ಲಭ್ಯವಿಲ್ಲ.

ಹೌದು ! ಕುಂದಗೋಳ ಪಟ್ಟಣದ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರ, ಹಾಗೂ ಕುರಬಗೇರಿಯಲ್ಲಿ ನಿರ್ಮಾಣವಾದ ಸಹಾಯಕ ಕೃಷಿ ನಿರ್ದೇಶಕರ ಕಟ್ಟಡಗಳು ಉದ್ವಾಟನೆ ಕಂಡು ಒಂದು ತಿಂಗಳು ಕಳೆದ್ರೂ, ಇಂದಿಗೂ ಬೀಗ ಜಡಿದುಕೊಂಡಿವೆ.

ಈ ರೀತಿ ಬಾಗಿಲು ಮುಚ್ಚಿರುವ ಕಟ್ಟಡಗಳನ್ನು ಕಂಡ ಸ್ಥಳೀಯ ರೈತರಲ್ಲಿ ಸಂಶಯ ಹೆಚ್ಚಿದೆ. ಗುತ್ತಿಗೆದಾರರಿಗೆ ಹಣ ಸಂದಾಯವಾಗಿಲ್ವಾ ? ಕಟ್ಟಡ ಪ್ರವೇಶಕ್ಕೆ ಕಾಲ ಕೂಡಿ ಬಂದಿಲ್ಲಾ ? ಇನ್ನೂ ಕಟ್ಟಡ ಕಾಮಗಾರಿ ಬಾಕಿ ಇದೆಯಾ ? ಹೀಗೆ ಹತ್ತಾರು ಪ್ರಶ್ನೆಗಳು ರೈತರನ್ನು ಕಾಡುತ್ತಿವೆ.

ಇತ್ತ ಶತಮಾನ ಗತಿಸಿದ ಹಳೇ ಕಟ್ಟಡದಲ್ಲೇ ರೈತ ಸಂಪರ್ಕ ಕೇಂದ್ರ ಕರ್ತವ್ಯ ನಿರ್ವಹಿಸುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಕೃಷಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಿಸಿ ಉದ್ಘಾಟನೆ ಕಂಡ ಕಟ್ಟಡದ ಉಪಯೋಗದ ಭಾಗ್ಯ ಕರುಣಿಸಿ ರೈತರನ್ನು ಅಭಿವೃದ್ಧಿ ಪಡಿಸಿ.

Edited By : Nagesh Gaonkar
Kshetra Samachara

Kshetra Samachara

09/11/2021 07:05 pm

Cinque Terre

63.16 K

Cinque Terre

1

ಸಂಬಂಧಿತ ಸುದ್ದಿ