ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಸರ್ಕಾರ ಎಷ್ಟೇ ಡಿಜಿಟಲೀಕರಣ ಬಗ್ಗೆ ಬೊಬ್ಬೆ ಹೊಡೆಯುತ್ತಿದ್ದರು ಸಹಿತ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಯನ್ನು ಸರಳೀಕರಣಗೊಳಿಸಲು ಮತ್ತು ಅಕ್ರಮಗಳನ್ನು ತಡೆಯಲು ಜಾರಿಯಾದ 'ಇ-ಸ್ವತ್ತು ತಂತ್ರಾಂಶ' ಮಾತ್ರ ನಿರಂತರವಾಗಿ 'ಸರ್ವರ್ ಡೌನ್' ಸಮಸ್ಯೆ ಎದುರಿಸುತ್ತಲೇ ಇದ್ದು, ನಿತ್ಯ ಸಾವಿರಾರು ಜನರಿಗೆ ತೀವ್ರ ತೊಂದರೆಯಾಗುತ್ತಿದೆ.
ಈ ಸಮಸ್ಯೆ ಕೇವಲ ಧಾರವಾಡ ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಸರ್ವೇಸಾಮಾನ್ಯ ಎನ್ನುವಂತಾತಗಿದೆ. ಸರ್ವೆಗಾಗಿ ದಾಖಲೆಗಳನ್ನು ನಾಡ ಕಚೇರಿಗೆ ಕಳುಹಿಸಿದರೂ ನಿಗದಿತ ಸಮಯಕ್ಕೆ ಸರ್ವೆ ವರದಿ ಬರುತ್ತಿಲ್ಲ ಎಂಬುದು ಪಿಡಿಒಗಳ ಅಳಲಾಗಿದೆ.
ಇನ್ನು, ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ಇ-ಸ್ವತ್ತು ನೀಡಬೇಕೆಂಬ ನಿಯಮವಿದ್ದರೂ ರಾಜ್ಯದ ಯಾವುದೇ ಭಾಗದಲ್ಲೂ ಸಿಗುತ್ತಿಲ್ಲ. ಆದರೆ, ತಂತ್ರಾಂಶ ಮಾತ್ರ ಸದಾ ಸಮಸ್ಯೆಯಿಂದ ಕೂಡಿದ್ದರಿಂದ ತಹಶೀಲ್ದಾರ ಕಚೇರಿಗೆ ಅಲೆದಾಡಿಸುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಒಟ್ಟಿನಲ್ಲಿ ಸಾರ್ವಜನಿಕರು ಸರ್ವರ್ ಸಮಸ್ಯೆಯಿಂದ ಎದುರಾಗುತ್ತಿರುವ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಎಲ್ಲರ ಒತ್ತಾಸೆ.
Kshetra Samachara
26/10/2021 03:30 pm