ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರಾಮಾಪೂರದಲ್ಲಿ ತಹಶೀಲ್ದಾರ, ಹಳ್ಳಿಗರ ಇಲಾಖೆ ಕೆಲ್ಸಾ ಊರಲ್ಲೇ ಸಲೀಸು

ಕುಂದಗೋಳ : ತಾಲೂಕಿನ ರಾಮಾಪೂರ ಗ್ರಾಮದಲ್ಲಿ ಇಂದು ಕುಂದಗೋಳ ಪಟ್ಟಣದ ಸರ್ಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡು ಜನರ ಸಮಸ್ಯೆ ಇತಿಶ್ರೀ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗಿದ್ದಾರೆ.

ಹೌದು ! ರಾಜ್ಯ ಸರ್ಕಾರದ ನಿರ್ದೇಶನದಂತೆ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಹಾಗೂ ಸಕಲ ಇಲಾಖೆ ಅಧಿಕಾರಿ ವೃಂದದವರು ರಾಮಾಪುರದಲ್ಲಿ ದೀಪ ಬೆಳಗಿಸುವ ಮೂಲಕ ಗ್ರಾಮ ವಾಸ್ತೂ ಕಾರ್ಯಕ್ರಮ ಆರಂಭಿಸಿ ಗ್ರಾಮದ ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ, ಕಂದಾಯ ಇಲಾಖೆ ಕೆಲಸಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿ ಕಚೇರಿಯ ಕರ್ತವ್ಯ, ತಾಲೂಕು ಪಂಚಾಯಿತಿ ಸೇರಿದಂತೆ ಸಕಲ ಇಲಾಖೆಯ ಪ್ರಯೋಜನ ಹಾಗೂಶ ಬಾಕಿ ಇರುವ ಅರ್ಜಿ ಇತ್ಯರ್ಥಕ್ಕೆ ರಾಮಾಪೂರ ಗ್ರಾಮ ತಲುಪಿದ್ದಾರೆ.

ಈಗಾಗಲೇ ಜನರಿಂದ ಅಗತ್ಯ ಅರ್ಜಿ ಪಡೆದು ಸಕಾಲಕ್ಕೆ ಪರಿಹಾರಕ್ಕೆ ಸೂಚಿಸಿದ ತಹಶೀಲ್ದಾರ, ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಸರ್ವ ಸಿಬ್ಬಂದಿಗಳು ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸಿ ಗ್ರಾಮದ ನಾಗರೀಕರ ಸಮಸ್ಯೆಗಳಿಗೆ ಸ್ಪಂದನೆ ಜೊತೆ ಪರಿಹಾರ ನೀಡುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

16/10/2021 04:57 pm

Cinque Terre

66.39 K

Cinque Terre

0

ಸಂಬಂಧಿತ ಸುದ್ದಿ