This is a modal window.
Beginning of dialog window. Escape will cancel and close the window.
End of dialog window.
ಕುಂದಗೋಳ : ನಮ್ಮ ಮನೆ ಉತಾರ ಸರಿಪಡಿಸಬೇಕು, ಅಯ್ಯೋ ಕಂಪ್ಯೂಟರ್ ಪಹಣಿ ತಗಸಿ ಸಾಲ ತಗೋಬೇಕು, ನಮ್ಮ ಮನೆಯನ್ನು ಸಹೋದರರು ಇಬ್ಭಾಗ ಮಾಡಿಕೊಳ್ಳಬೇಕು ಎನ್ನುವವರು ಇನ್ಮುಂದೆ ಕಾಗದ ಪತ್ರ ಹಿಡಿದು ಕಚೇರಿ ಕಚೇರಿ ಅಲೆಯಬೇಕಿಲ್ಲ ಬಿಡಿ. ಆ ಅಲೆದಾಟಕ್ಕೆ ಸ್ವಾಮಿತ್ವ ಯೋಜನೆ ಪುಲ್ ಸ್ಟಾಪ್ ಹೇಳಲಿದೆ.
ಸರ್ವೇ ಆಫ್ ಇಂಡಿಯಾ ಐಡಿಪಿಆರ್ ಭೂಮಾಪನಾ ಇಲಾಖೆಯ ಸಹಭಾಗಿತ್ವದಲ್ಲಿ ಕುಂದಗೋಳ ತಾಲೂಕಿನ ಪ್ರತಿಯೊಂದು ಹಳ್ಳಿಗಳ ಸರ್ವೇ ಪ್ರಕ್ರಿಯೆ ಆರಂಭವಾಗಿದ್ದು, ಈ ಸರ್ವೇ ಬಳಿಕ ಜನರಿಗೆ ಅವರವರ ಮನೆ ಹಾಗೂ ಖಾಲಿ ಜಾಗದ ಇ ಸ್ವತ್ತು ಉತಾರ ಅವರವರ ಕೈ ಸೇರಲಿದೆ ಇದಕ್ಕಾಗಿ ಯಾವುದೇ ರೈತರು ಇಲಾಖೆಗೆ ಅರ್ಜಿ ನೀಡಬೇಕಾಗಿಲ್ಲ ಹಣ ಪಾವತಿಸಬೇಕಿಲ್ಲ.
ರಾಜ್ಯಾದ್ಯಂತ 16 ಜಿಲ್ಲೆಗಳಲ್ಲಿ ಈ ಸ್ವಾಮಿತ್ವ ಯೋಜನೆ ಚಾಲ್ತಿಯಲ್ಲಿದ್ದು, ಅದರಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಎರೆಡು ಹಳ್ಳಿ ಹಾಗೂ ಹಿರೇನರ್ತಿ ಗ್ರಾಮ ಪಂಚಾಯಿತಿ ಮೂರು ಹಳ್ಳಿಗಳಲ್ಲಿ ಭೂ ಮಾಪನಾ ಇಲಾಖೆ ಅಧಿಕಾರಿಗಳು ಪ್ರಥಮವಾಗಿ ಇಂದು ಡ್ರೋನ್'ಗೆ ಪೂಜೆ ಸಲ್ಲಿಸಿ ಸರ್ವೇ ಕಾರ್ಯ ಆರಂಭ ಮಾಡಿದ್ದಾರೆ.
ಈ ಸರ್ವೇಗೆ ಪ್ರಕ್ರಿಯೆ ಸರ್ಕಾರ ಏಪ್ರಿಲ್ 22 ರಂದೇ ಆದೇಶ ನೀಡಿದ್ದು ಈಗ ಕಾರ್ಯಾರಂಭ ಮಾಡಿದೆ, ಈ ಸರ್ವೇ ಕಾರ್ಯದ ಯಶಸ್ವಿಯಾದಲ್ಲಿ ರೈತರಿಗೆ ಅವರವರ ಆಸ್ತಿ ಕೆಲಸ ಸುಲಭದ ಜೊತೆ ಒಟ್ಟು ವಿಸ್ತೀರ್ಣ ತಿಳಿಯಲಿದೆ ಜೊತೆಗೆ ಇಲಾಖೆಗೆ ಯಾರ ಹೆಸರಲ್ಲಿ ಆಸ್ತಿ ಇದೆ ? ಯಾವ ಆಸ್ತಿ ಅಕ್ರಮವಾಗಿದೆ ? ಯಾವ ಆಸ್ತಿ ಕರ ಪಾವತಿ ಮಾಡುತ್ತಿಲ್ಲ ? ಎಂಬ ಸ್ಪಷ್ಟತೆಯೊಂದಿಗೆ ಆಸ್ತಿ ವ್ಯಾಜ್ಯಗಳಿದ್ದಲ್ಲಿ ಬಗೆಹರಿಯಲಿವೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
14/10/2021 10:51 am