ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆರಕ್ಷಕರ ಕುಟುಂಬದವರ ರಕ್ಷಣೆ ಯಾರ ಹೆಗಲಿಗೆ?

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಪೊಲೀಸರೆಂದರೆ ಅವರಿಗೆ ಸರ್ಕಾರ ಎಲ್ಲಾ ಸವಲತ್ತುಗಳನ್ನು ನೀಡಿರುತ್ತದೆ ಎಂಬುದೇ ನಮ್ಮ ಊಹೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಪೊಲೀಸರಿಗೆ ಉತ್ತಮ ರೀತಿಯ ಸವಲತ್ತುಗಳನ್ನು ನೀಡಿರಬಹುದು. ಆದರೆ, ಧಾರವಾಡದಲ್ಲಿ ಪೊಲೀಸರಿಗೆ ಹಂಚಿಕೆ ಮಾಡಲಾಗಿರುವ ಪೊಲೀಸ್ ವಸತಿ ಗೃಹಗಳನ್ನು ನೋಡಿದರೆ ಆರಕ್ಷಕರ ಕುಟುಂಬ ಭಯದ ಮಧ್ಯೆಯೇ ದಿನ ದೂಡುತ್ತಿವೆ ಎಂಬುದು ಗೊತ್ತಾಗುತ್ತದೆ. ಹಾಗಾದ್ರೆ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.

ಹೊರಗಿನಿಂದ ನೋಡಿದರೆ ಹೊಚ್ಚ ಹೊಸದಾದ ಕಟ್ಟಡ. ನಿಜಕ್ಕೂ ಇದು ಹೊಸ ಕಟ್ಟಡವೂ ಹೌದು. ಇದು ನಿರ್ಮಾಣಗೊಂಡಿದ್ದು ಆರು ವರ್ಷಗಳ ಹಿಂದೆಯಷ್ಟೇ. ಆದರೂ ಇಂತಹ ಹೊಸ ಕಟ್ಟಡದಲ್ಲಿರೋಕೆ ಇಲ್ಲಿನವರು ಹೆದರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಈ ಕಟ್ಟಡ ಕುಸಿದು ಬೀಳುವ ಭೀತಿಯಲ್ಲಿದೆ. ಇದು ಧಾರವಾಡದ ಸಾಧನಕೇರಿಯ ರಕ್ಷಾ ಕಾಲೊನಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿಯೇ ನಿರ್ಮಿಸಿರುವ ವಸತಿ ಸಮುಚ್ಚಯ. ಒಟ್ಟು ಎರಡು ವಿಭಾಗಗಳಲ್ಲಿ ತಲಾ ಎರಡು ಮಹಡಿಗಳಿದ್ದು, 24 ಕುಟುಂಬಗಳು ಇಲ್ಲಿವೆ. ದುರಂತ ಅಂದ್ರೆ ಇಡೀ ಕಟ್ಟಡವೇ ಈಗ ಹಿಂಭಾಗಕ್ಕೆ ಕುಸಿದು ಬೀಳುತ್ತೇನೋ ಎನ್ನುವ ಭೀತಿ ಎದುರಾಗಿದೆ. ಈ ಕಟ್ಟಡದ ಹಿಂಭಾಗದಲ್ಲಿ ಸಣ್ಣದಾಗಿ ಶುರುವಾಗಿದ್ದ ಕುಸಿತ ಈಗ ದೊಡ್ಡ ಪ್ರಮಾಣಕ್ಕೇರಿದೆ. ಆರಂಭದಲ್ಲಿ ಕಟ್ಟಡಕ್ಕೆ ಹಾಕಲಾಗಿದ್ದ ಆವರಣ ಗೋಡೆ ಕುಸಿದು ಬೀಳುತ್ತಿದೆ ಅಂತಾನೇ ಇಲ್ಲಿದ್ದವರು ಭಾವಿಸಿದ್ದರು. ಆದರೆ ಈಗ ಆವರಣ ಗೋಡೆ ಸಮೇತ ಕಟ್ಟಡಕ್ಕೆ ಮಾಡಲಾಗಿದ್ದ ಹೊರಕವಚವೂ ಸಹ ಕುಸಿಯೋದಕ್ಕೆ ಶುರುವಾದಾಗಿನಿಂದ ಇಲ್ಲಿರುವ ಪೊಲೀಸ್ ಕುಟುಂಬಗಳು ಜೀವ ಭಯದಲ್ಲಿ ದಿನ ಕಳೆಯುತ್ತಿವೆ.

ಇದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಬರುವ ವಸತಿ ಸಮುಚ್ಚಯ. ಇಲ್ಲಿರುವ ಎಲ್ಲರೂ ಈ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುವ ಪೊಲೀಸರು. ಆದರೆ ಈ ಪೊಲೀಸ್ ಕುಟುಂಬಗಳೇ ಈಗ ಭಯದಲ್ಲಿರಬೇಕಾಗಿದೆ. ಮೇಲ್ಮಹಡಿಯಲ್ಲಿರುವ ಮನೆಗಳಲ್ಲಿ ತಾರಸಿಯಿಂದ ಸಾಕಷ್ಟು ನೀರು ಸೋರಿಕೆಯಾಗುತ್ತಿದ್ದು, ಇಂತಹ ಹೊಚ್ಚ ಹೊಸ ಕಟ್ಟಡದಲ್ಲಿದ್ದರೂ ಪ್ಲಾಸ್ಟಿಕ್ ಕಟ್ಟಿಕೊಂಡು ಮನೆಯೊಳಗೆ ಗುಡಿಸಲಿನಂತೆ ಇರಬೇಕಾದ ಸ್ಥಿತಿ ಈ ಕುಟುಂಬಗಳದ್ದು. ಇದೊಂದು ಮಾತ್ರವಲ್ಲ ಈ ಕಟ್ಟದೊಳಗೆ ಒಮ್ಮೆ ಪ್ರವೇಶಿಸಿದರೆ ಸಾಕು ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳೇ ಎದುರಾಗುತ್ತವೆ. ಇಡೀ ಕಟ್ಟಡವೇ ಕುಸಿಯುವ ಭೀತಿಯಲ್ಲಿರುವ ಕಾರಣಕ್ಕೆ ದುರಂತ ಸಂಭವಿಸುವ ಮುಂಚೆಯೇ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

Edited By : Manjunath H D
Kshetra Samachara

Kshetra Samachara

25/09/2021 10:21 am

Cinque Terre

83.61 K

Cinque Terre

6

ಸಂಬಂಧಿತ ಸುದ್ದಿ