ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನೈರ್ಮಲ್ಯ ಕಂಡ ತಹಶೀಲ್ದಾರ ಕಚೇರಿ ಕೊಳಚೆ ಮಾಯ

ಕುಂದಗೋಳ : ಪಟ್ಟಣದ ತಹಶೀಲ್ದಾರ ಕಚೇರಿಯ ಸುತ್ತ ಅತಿವೃಷ್ಟಿ ಪರಿಣಾಮ ಸಂಗ್ರಹವಾದ ಕಲುಷಿತ ನೀರು ಹಾಗೂ ಅನೈರ್ಮಲ್ಯದ ಕುರಿತು ಪಬ್ಲಿಕ್ ನೆಕ್ಸ್ಟ್ ಸರಣಿ ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.

ಈ ವರದಿ ಪ್ರಕಟಗೊಂಡ ಬಳಿಕ ಜಿಲ್ಲಾಧಿಕಾರಿಗಳು ಕುಂದಗೋಳಕ್ಕೆ ಭೇಟಿ ಕೊಟ್ಟಾಗ ತಹಶೀಲ್ದಾರ ಕಚೇರಿ ಸುತ್ತಲಿನ ವಾತಾವರಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

ಇದೀಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅತಿವೃಷ್ಟಿ ಪರಿಣಾಮ ಕೆಸರು ನೀರು ಸಂಗ್ರಹವಾದ ಗುಂಡಿಗಳನ್ನು ಗೋರಚು ಮಣ್ಣು ಹಾಕಿ ಮುಚ್ಚುತ್ತಿದ್ದು ಕಲುಷಿತ ನೀರನ್ನು ಮೋಟಾರ್ ಮೂಲಕ ಹೊರಬಿಟ್ಟು ನಿರ್ಮಲ ವಾತಾವರಣ ಕಲ್ಪಿಸಿದ್ದಾರೆ.

ಈ ಕಾರ್ಯಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು ತಹಶೀಲ್ದಾರ ಕಚೇರಿಯ ಅಧಿಕಾರಿಗಳಿಗೆ ಹಾಗೂ ಇಲಾಖೆಗೆ ಆಗಮಿಸೋ ಜನರಿಗೆ ಕಾಡುತ್ತಿದ್ದ ಸೊಳ್ಳೆಗಳ ಕಾಟ ಹಾಗೂ ರೋಗಗಳ ಭೀತಿ ದೂರವಾದಂತಾಗಿದೆ.

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

26/02/2021 07:47 pm

Cinque Terre

63.2 K

Cinque Terre

0

ಸಂಬಂಧಿತ ಸುದ್ದಿ