ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಹಶೀಲ್ದಾರ ಕಚೇರಿಗೆ ಜಲ ಕಂಟಕ ಇಂದು ಡಿಸಿ ಭೇಟಿ ಪರಿಶೀಲನೆ

ಕುಂದಗೋಳ : ತಾಲೂಕಿನ ಗ್ರಾಮ ಪಂಚಾಯಿತಿಗೆ ಚುನಾಯಿತರಾದ ಸದಸ್ಯರ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಕಾರ್ಯಕ್ರಮದ ನಿಮಿತ್ತ ಕುಂದಗೋಳ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಹಶೀಲ್ದಾರ ಕಚೇರಿಯ ಆವರಣವನ್ನು ಪರಿಶೀಲನೆ ನಡೆಸಿದರು.

ಮಳೆಗಾಲದ ಸಮಯ ತಹಶೀಲ್ದಾರ ಕಚೇರಿ ಆವರಣದಲ್ಲಿ ವಿಪರೀತವಾಗಿ ಸಂಗ್ರಹವಾಗುವ ನೀರಿಗೆ ಶಾಶ್ವತವಾದ ಕ್ರಮ ಕೈಗೊಂಡು ನೀರು ಹೊರ ಹಾಕಿರಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್ ಗೊಂದಕರ್ ಅವರನ್ನು ತರಾಟೆಗೆ ತೆಗೆದುಕೊಂಡರು, ಬಳಿಕ ತಹಶೀಲ್ದಾರ ಕಚೇರಿ ಆವರಣದಲ್ಲಿ ಎಲ್ಲೇಂದರಲ್ಲಿ ಉಗುಳಿದ ಎಲೆ ಅಡಿಕೆ ಕಲೆಗಳನ್ನು ಗಮನಿಸಿ ಅನೈರ್ಮಲ್ಯ ಸರಿಪಡಿಸುವಂತೆ ತಾಲೂಕು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ತಹಶೀಲ್ದಾರ ಕಚೇರಿ ಆವರಣದಲ್ಲಿನ ನೀರು ಸಂಗ್ರಹವಾಗುವ ಬಗ್ಗೆ ಪೂರಕ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಹಶೀಲ್ದಾರ ಕಚೇರಿ ಕಾಂಪೌಂಡ್ ಗೋಡೆ ಪಕ್ಕದ ಚರಂಡಿ ಗಮನಿಸಿದ ಡಿಸಿ ಚರಂಡಿ ಮೇಲೆ ಗೂಡಂಗಡಿ ನಿರ್ಮಿಸಿದ ಕಾರಣ ಚರಂಡಿ ನೀರು ಸಮರ್ಪಕವಾಗಿ ಹೋಗದೆ ಈ ದುಸ್ಥಿತಿ ಉಂಟಾಗಿದೆ. ಈ ಬಗ್ಗೆ ತಹಶೀಲ್ದಾರ ಸಹಕಾರ ಪಡೆದು ಪಟ್ಟಣ ಪಂಚಾಯಿತಿ ಅಧಿಕಾರಿ ರಮೇಶ್ ಗೋಂದಕರಗೆ ಸೂಕ್ತ ಕ್ರಮ ಜರುಗಿಸಲು ತಿಳಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಬಿದ್ದರೆ ಪೊಲೀಸರ ಸಹಕಾರ ಪಡೆಯಲು ಸೂಚಿಸಿದರು.

ಬಳಿಕ ಗೂಡಂಗಡಿ ಮಾಲೀಕರೊಬ್ಬರನ್ನು ಜಿಲ್ಲಾಧಿಕಾರಿಗಳು ಎಷ್ಟು ವರ್ಷದಿಂದ ತಹಶೀಲ್ದಾರ ಕಚೇರಿ ಎದುರು ಅಂಗಡಿ ಹಾಕಿದ್ದೀರಿ ಇದು ಸರಿಯೇ ? ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿ ಎಲ್ಲರೂ ಗೂಡಂಗಡಿ ತೆರವು ಗೊಳಿಸಿ ಬೇರೆಡೆ ಮಾಡಿಕೊಳ್ಳಿ ಎಂದರು.

Edited By : Manjunath H D
Kshetra Samachara

Kshetra Samachara

13/01/2021 04:23 pm

Cinque Terre

38.88 K

Cinque Terre

0

ಸಂಬಂಧಿತ ಸುದ್ದಿ