ಹುಬ್ಬಳ್ಳಿ: ನಮ್ಮ ದೇಶದ ರಾಷ್ಟ್ರಧ್ವಜಕ್ಕೆ ತನ್ನದೆ ಆದ ಗೌರವವಿದೆ. ಈ ಗೌರವಕ್ಕೆ ಅಪಮಾನ ಮಾಡುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ನರೇಂದ್ರ ಮೋದಿ ಸರಕಾರ ಬೇಕಾದ ಬಟ್ಟೆಯಲ್ಲಿ ಧ್ವಜ ಮಾಡಿ ಎಂದಿದೆ. ಇದರಿಂದಾಗಿ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದರೆ, ಕೈಮಗ್ಗಗಳಿಗೆ ಬೀಗ ಜಡಿಯುವ ಪರಿಸ್ಥಿತಿ ಬಂದೊದಗಿದೆ. ಈ ನಿಟ್ಟಿನಲ್ಲಿ ಈಗ ಕಾರ್ಮಿಕರು ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಹೌದು..ದೇಶೀಯತೆ, ಸ್ವಾವಲಂಬನೆಯ ಹಿನ್ನೆಲೆಯಲ್ಲಿ ಖಾದಿಯ ಬಗ್ಗೆ ಕನಸು ಕಂಡಿದ್ದು ಮಹಾತ್ಮಾ ಗಾಂಧಿಯವರು. ದೇಶಾದ್ಯಂತ ಖಾದಿ ಗ್ರಾಮೋದ್ಯೋಗಕ್ಕೆ, ಅದರಲ್ಲೂ ಮುಖ್ಯವಾಗಿ ಖಾದಿ ಬಟ್ಟೆಯಲ್ಲಿಯೇ ನಿರ್ದಿಷ್ಟ ಮಾನದಂಡದೊಂದಿಗೆ ರಾಷ್ಟ್ರದ ನಿರ್ಮಾಣವಾಗಬೇಕು ಎಂಬ ಧ್ವಜ ನೀತಿ ಜಾರಿಗೆ ಬಂತು. ಆದರೆ, ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ಹೊಸ ಧ್ವಜ ನೀತಿ ಹೊರಡಿಸಿದೆ. ಇದು ಕೇಂದ್ರ ಸರ್ಕಾರ ಖಾದಿ, ರಾಷ್ಟ್ರಧ್ವಜ ತಯಾರಿಸುವವರ ಅಸ್ತಿತ್ವದ ಪ್ರಶ್ನೆಯನ್ನು ಹುಟ್ಟುಹಾಕಿದೆ. ನಮ್ಮ ಹೆಮ್ಮೆಯ ತ್ರಿವರ್ಣಧ್ವಜದ ಬಟ್ಟೆಯನ್ನು ಸಿದ್ಧಪಡಿಸುವುದು ಅಪರೂಪದ ಕಾಯಕ. ಧಾರವಾಡದ ಗರಗ ಹಾಗೂ ಹೆಬ್ಬಳ್ಳಿ, ಬಾಗಲಕೋಟೆ ಜಿಲ್ಲೆಯಲ್ಲಿರುವ ತುಳಸಿಗೇರಿಯ ಖಾದಿ ಕೇಂದ್ರ, ಸೀಮಿಕೇರಿ, ಜಾಲಿಹಾಳಗಳಲ್ಲಿರುವ ಖಾದಿ ಕೇಂದ್ರಗಳಲ್ಲಿ ರಾಷ್ಟ್ರಧ್ವಜ ನೇಯುತ್ತಾರೆ. ಇವರು ನೇಯ್ದ ಬಟ್ಟೆಗೆ ಪವಿತ್ರ ರಾಷ್ಟ್ರಧ್ವಜದ ರೂಪ ನೀಡುತ್ತಿರುವುದು ಹುಬ್ಬಳ್ಳಿಯ ಬೆಂಗೇರಿ. ಕೇಂದ್ರ ಸರ್ಕಾರದ ಮಾಡಿದ ಎಡವಟ್ಟಿಗೆ ಈಗ ಕರ್ನಾಟಕ ಖಾದಿ ಗ್ರಾಮೋದ್ಯೋಗದಲ್ಲಿ ಇಂಥದ್ದೊಂದು ಶ್ರೇಷ್ಠ ಕಾಯಕ ಮಾಡುತ್ತಿರುವ 1500 ಕ್ಕೂ ಹೆಚ್ಚು ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈಗ ಅನಿವಾರ್ಯ ಕಾರಣದಿಂದ ಸತ್ಯಾಗ್ರಹದ ಹಾದಿ ತುಳಿದಿದ್ದಾರೆ.
ಗುಣಮಟ್ಟದೊಂದಿಗೆ ರಾಷ್ಟ್ರಧ್ವಜ ತಯಾರಿಸಿ ಮಾರಾಟ ಮಾಡುವ ಅಧಿಕಾರವನ್ನು ದೇಶದಲ್ಲಿಯೇ ಹುಬ್ಬಳ್ಳಿಯ ಬೆಂಗೇರಿ ಹೊಂದಿದೆ. ಕರ್ನಾಟಕ ಖಾದಿ ಗ್ರಾಮೋದ್ಯೋಗ ಫೆಡರೇಶನ್‌ಗೆ ಕೇಂದ್ರ ಗೃಹ ಇಲಾಖೆ ಅನುಮತಿ ಸಹ ನೀಡಿದೆ. ರಾಷ್ಟ್ರಧ್ವಜಗಳನ್ನ ಯಂತ್ರಗಳಿಂದ ಹ್ಯಾಂಡ್‌ಸ್ಪನ್, ಕಾಟನ್ ಪಾಲಿಸ್ಟರ್, ಉಣ್ಣೆ, ಸಿಲ್ಕ್‌ನಿಂದ ಯಾರು ಬೇಕಾದರೂ ತಯಾರಿಸಬಹುದು ಎಂದು ಈಗ ಕೇಂದ್ರ ಸರ್ಕಾರ ಹೇಳಿದೆ. ಧ್ವಜವನ್ನ ಯಾರ ಬೇಕಾದ್ರೂ, ಯಾವುದೇ ಬಟ್ಟೆಯಲ್ಲಿಯಾದರೂ ರಾಷ್ಟ್ರಧ್ವಜವನ್ನು ಸಿದ್ಧಗೊಳಿಸಬಹುದು ಎಂದು ರಾಷ್ಟ್ರದ ಕಾನೂನನ್ನೇ ತಿದ್ದಿದೆ. ಈ ಮೂಲಕ ಕೇಂದ್ರ ಸರ್ಕಾರ ನಿಯಮವನ್ನು ಉಲ್ಲಂಘಿಸಿದೆ. ದೇಶೀಯತೆಯ, ಸ್ವಾವಲಂಬನೆಯ, ರಾಷ್ಟ್ರೀಯತೆಯ ಗೌರವಕ್ಕೆ ಪಾತ್ರ ವಾಗಿರುವ ಖಾದಿಯನ್ನು, ಖಾದಿಧ್ವಜವನ್ನು ಕೊಲ್ಲಲು ಕೇಂದ್ರ ಸರ್ಕಾರ ಹೊರಟಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/07/2022 03:50 pm