ಕುಂದಗೋಳ: ಇಂದು ಸಂಜೆ ಸುರಿದ ಧಾರಾಕಾರ ಮಳೆಗೆ ಕುಂದಗೋಳ ಪಟ್ಟಣದಲ್ಲಿ ಬೃಹತ್ ಗ್ರಾಮದ ಮರ, ವಿದ್ಯುತ್ ಕಂಬ ನೆಲಕ್ಕುರುಳಿವೆ.
ಕುಂದಗೋಳದ ಭಾರತ್ ಪೆಟ್ರೋಲ್ ಬಂಕ್ ಬಳಿ ಬೃಹತ್ ಗಾತ್ರದ ನೆಲಗಿರಿ ಮರ ನೆಲಕ್ಕೆ ಬಿದ್ದಿದೆ, ಮಾರ್ಕೆಟ್ ರಸ್ತೆಯ ದುರ್ಗಾದೇವಿ ದೇವಸ್ಥಾನದ ಬಳಿ ಬೇವಿನಮರದ ಟೊಂಗೆ ಬಿದ್ದು ಕೆಲ ಬೈಕ್‌ಗಳಿಗೆ ಹಾನಿಯಾಗಿದೆ. ಇನ್ನು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮರದ ಟೊಂಗೆ ಬಿದ್ದು ಬೈಕ್‌ಗಳು ಮರದಡಿ ಸಿಲುಕಿಕೊಂಡಿವೆ.
ಅಷ್ಟೇ ಅಲ್ಲದೆ ತಹಶೀಲ್ದಾರ್ ಕಚೇರಿ ಆವರಣದ ತುಂಬಾ ಮಳೆ ನೀರು ಭರ್ತಿಯಾಗಿ ಬೈಕ್ ವಾಹನ ಜನಸಂಚಾರ ನೀರಲ್ಲೇ ನಡೆದಿದೆ. ದೊಡ್ಡಗುಡಿ ಹತ್ತಿರ ವಿದ್ಯುತ್ ಕಂಬ ಬಿದ್ದಿದೆ. ಇದಲ್ಲದೆ ರೈಲ್ವೆ ಸ್ಟೇಷನ್ ಬಳಿ ಚರಂಡಿ ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗಿದ್ದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಪೌರ ಕಾರ್ಮಿಕರು ನೀರು ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದಾರೆ.
Kshetra Samachara
02/06/2022 09:47 pm