ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹೆಸರಿಗಷ್ಟೇ ತಾಲೂಕು ಅಭಿವೃದ್ಧಿ ಎಲ್ಲಾ ಮೂಲೆಗುಂಪು !

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ.

ಕುಂದಗೋಳ : ಪಟ್ಟಣದ ತೋರಣಗೆಟ್ಟಿ ಕೆರೆ ಸಂಪೂರ್ಣ ಹಾಳಾಗಿದ್ದು ಈ ಬಗ್ಗೆ ಸ್ಥಳೀಯ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಹೀಗಾಗಿ ತೋರಣಗಟ್ಟಿ ಕೆರೆಯಲ್ಲಿ ಕಲುಷೀತ ನೀರು ಸಂಗ್ರಹವಾದ ಪ್ಲಾಸ್ಟಿಕ್ ನಿಂದ ಗಬ್ಬು ವಾಸನೆ ಹಾಗೂ ಹಾವು ಚೇಳು ವಿವಿಧ ಸರೀಸೃಪಗಳ ಕಾಟದಿಂದ ಜನ ಬೇಸತ್ತಿದ್ದೂ ನಿತ್ಯವು ನರಕಯಾತನೆ ಅನುಭವಿಸುತ್ತಿದ್ದಾರೆ, ಹಗಲಲ್ಲೇ ಸೊಳ್ಳೆಗಳು ಯಮಸ್ವರೂಪಿಯಾಗಿ ಕಾಡುತ್ತಿವೆ. ಸತತ 20-30 ವರ್ಷಗಳಿಂದ ಕರೆ ಪರಿಸ್ಥಿತಿ ಹೀಗೆ ಮುಂದುವರಿದೆ.

ಈ ಕಾರಣ ಕುಂದಗೋಳ ನಿವಾಸಿಗಳು ಕರೆಯ ಸುತ್ತ ಕಾಂಪೌಂಡ್ ನಿರ್ಮಿಸಿ, ದೀಪ ದೀಪದ ವ್ಯವಸ್ಥೆ ಮಾಡಿಸಿ ಚರಂಡಿ ಸರಿಪಡಿಸಿ ಕರೆ ಸ್ವಚ್ಚ ಮಾಡಿ ಎಂದು ಪಬ್ಲಿಕ್ ನೆಕ್ಸ್ಟ್ ಮೂಲಕ ಗೋಳು ತೋಡಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

10/10/2020 06:48 pm

Cinque Terre

22.31 K

Cinque Terre

11

ಸಂಬಂಧಿತ ಸುದ್ದಿ