ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂ.51ರ ಜನರ ಗತಿ ಅಧೋಗತಿ; ಕಣ್ಮುಚ್ಚಿ ಕುಳಿತ ಪಾಲಿಕೆ ಸದಸ್ಯೆ, ಅಧಿಕಾರಿಗಳು

ಪಬ್ಲಿಕ್ ನೆಕ್ಸ್ಟ್ ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಈ ವಾರ್ಡಿನಲ್ಲಿರುವ ಜನರು ಅದು ಹೇಗೆ ತಮ್ಮ ದಿನನಿತ್ಯದ ಜೀವನ ನಡೆಸುತ್ತಾರೋ ಎಂಬುದು ತಿಳಿಯದಂತಾಗಿದೆ. ಯಾಕೆಂದರೆ ಇವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಹೌದು. ಹೀಗೆ ರಸ್ತೆಯಲ್ಲಿ ತಗ್ಗು ಗುಂಡಿಗಳು, ಪರದಾಡುತ್ತಾ ಹೋಗುತ್ತಿರುವ ಶಾಲಾ ಮಕ್ಕಳು, ಇಷ್ಟೆಲ್ಲ ದೃಶ್ಯಗಳು ಕಂಡು ಬಂದಿದ್ದು

ವಾರ್ಡ್ ನಂಬರ್ 51ರಲ್ಲಿ ಬರುವ ಎಆರ್‌ಟಿ ನಗರದಲ್ಲಿ. ಇಲ್ಲಿ ಸುಮಾರು ವರ್ಷಗಳಿಂದ ರಸ್ತೆ ಇಲ್ಲದೆ ಜನರು ಪ್ರಯಾಣ ಮಾಡಲು ಪರದಾಡುತ್ತಿದ್ದಾರೆ. ಪಕ್ಕದಲ್ಲೇ ಶಾಲೆ ಇರುವುದರಿಂದ ಮಕ್ಕಳಿಗೂ ತುಂಬಾ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೆ ಇಲ್ಲೊಂದು ವಾರ್ಡ್ ಕೂಡ ಇದೆ ಅದು ಕೇವಲ ಕುಡುಕರ ಅಡ್ಡೆಯಾಗಿದೆ. ಯಾವುದೇ ರೀತಿಯ ಸ್ವಚ್ಛತೆ ಇಲ್ಲಾ. ಎಲ್ಲೆಂದರಲ್ಲಿ ಬಾಟಲ್‌ಗಳು, ಗಿಡ ಗಂಟಿಗಳು ಬೆಳೆದು ನಿಂತಿವೆ. ಇಷ್ಟೆಲ್ಲಾ ಸಮಸ್ಯೆಗಳ ಬಗ್ಗೆ ಇಲ್ಲಿನ ಜನರು ಪಾಲಿಕೆ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ಅದೆಷ್ಟೋ ಬಾರಿ ಮನವಿ ಮಾಡಿದರೂ ಯಾರೂ ಕ್ಯಾರೆ ಎನ್ನುತ್ತಿಲ್ಲವಂತೆ. ಆದಷ್ಟು ಬೇಗ ಇಲ್ಲಿನ ಸಮಸ್ಯೆಗಳನ್ನು ಬಗೆ ಹರಿಸದಿದ್ದರೆ ಪಾಲಿಕೆ ಸದಸ್ಯರು ಮತ್ತು ಮಹಾನಗರ ಪಾಲಿಕೆ ಮುಂದೆ ಧರಣಿ ಕೂಡಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಇಲ್ಲಿನ ಜನರು ಪಾಲಿಕೆಗೆ ಸರಿಯಾಗಿ ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಯಾಕೆ ಅವರಿಗೆ ಮೂಲಭೂತ ಸೌಕರ್ಯಗಳನ್ನು ಕೊಡುತ್ತಿಲ್ಲ. ಆದಷ್ಟು ಬೇಗ ಇಲ್ಲಿನ ಜನರ ಸಮಸ್ಯೆಗಳನ್ನು ಪಾಲಿಕೆ ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರು ಬಗೆ ಹರಿಸಬೇಕು ಎನ್ನುವುದು ಪಬ್ಲಿಕ್ ನೆಕ್ಸ್ಟ್ ಆಗ್ರಹವಾಗಿದೆ.

Edited By :
Kshetra Samachara

Kshetra Samachara

10/06/2022 11:40 am

Cinque Terre

49.51 K

Cinque Terre

1

ಸಂಬಂಧಿತ ಸುದ್ದಿ