ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ದೇವನೂರ ಗ್ರಾಮದ ರಸ್ತೆ ಸಂಪೂರ್ಣ ಕೆಸರು ಸಂಗ್ರಹವಾಗಿ ಸಂಚಾರಕ್ಕೆ ಮಾರಕವಾಗಿವೆ. ಹೀಗಾಗಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದೇವನೂರು ಗ್ರಾಮದ ರಸ್ತೆ ಪರಿಸ್ಥಿತಿ ಅವಲೋಕಿಸುವಂತೆ ಅಲ್ಲಿನ ಜನತೆ ಹೇಳ್ತಾ ಇದ್ದಾರೆ.
ಹೌದು… ನಿತ್ಯ ಶಾಲಾ ಮಕ್ಕಳು, ರೈತಾಪಿ ಜನರು ಇದೇ ರಸ್ತೆಯಲ್ಲಿ ಅನಿವಾರ್ಯವಾಗಿ ಓಡಾಟ ನಡೆಸಿದ್ದು ರೋಗಕ್ಕೆ ತುತ್ತಾಗುವ ಭೀತಿಯೂ ಎದುರಾಗಿದೆ. ಅಲ್ಲದೇ ಈ ರಸ್ತೆಯಲ್ಲಿ ಅದೆಷ್ಟೋ ಮಂದಿ ಬಿದ್ದು ಎದ್ದವರು ವ್ಯವಸ್ಥೆಯನ್ನ ಶಪಿಸುತ್ತಿದ್ದಾರೆ.
ಮುಖ್ಯವಾಗಿ ದೇವನೂರ ಗ್ರಾಮದ ಖಾಸಗಿ ಬ್ಯಾಂಕ್, ಖಾಸಗಿ ವೈದ್ಯರು ಇರುವ ರಸ್ತೆ ಸಂಪೂರ್ಣ ರಾಡಿ ತುಂಬಿದ್ದು ಜನ ವೈದ್ಯರನ್ನು ಕಾಣೋದು, ಬ್ಯಾಂಕ್ ವ್ಯವಹಾರಕ್ಕೆ ಹೋಗುವುದೇ ಕಷ್ಟವಾಗಿದೆ. ಸದ್ಯ ದೇವನೂರು ಗ್ರಾಮದ ರಸ್ತೆ ದುಸ್ಥಿತಿಯನ್ನು ಅಲ್ಲಿನ ಗ್ರಾಮಸ್ಥರೇ ಪಬ್ಲಿಕ್ ನೆಕ್ಸ್ಟ್ ಗೆ ವಿಡಿಯೋ ಕಳುಹಿಸಿ ಸಮಸ್ಯೆ ವಿವರಿಸಿ ಅಧಿಕಾರಿಗಳು ಇತ್ತ ಗಮನ ಕೊಡಿ ಎಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/07/2022 04:03 pm