ತಾಲೂಕಿನ ಸಂಶಿಯಿಂದ ಗುಡಗೇರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ದುಸ್ಥಿತಿ ನೋಡಿದ್ರೆ ನಿಜಕ್ಕೂ ಇದು ನರಕದ ಮಾರ್ಗ ಎಂದೆನಿಸುವಂತಿದೆ.
ಹೌದು.. ರಸ್ತೆಯುದ್ದಕ್ಕೂ ಬಿದ್ದಿರುವ ತಗ್ಗು ದಿಣ್ಣೆಗಳು ಪ್ರಯಾಣಿಕರ ಸಂಚಾರಕ್ಕೆ ಕಂಟಕವಾಗಿವೆ. ಈ ರಸ್ತೆ ಪರಿಸ್ಥಿತಿ ಕೆಟ್ಟ ಪರಿಣಾಮ ಸಾರಿಗೆ ಬಸ್ ಸಂಚಾರ ಅಪರೂಪವೇ ಆಗಿದೆ. ಇನ್ನೂ ಖಾಸಗಿ ವಾಹನ ಸವಾರರು ಆಡಳಿತ ವ್ಯವಸ್ಥೆ ಶಪಿಸುತ್ತಾ ಓಡಾಡುವ ಅನಿವಾರ್ಯತೆ ಎದುರಾಗಿದೆ. ಈ ರಸ್ತೆ ಹಾಳಾಗಿ ದಶಕಗಳೇ ಕಳೆಯುತ್ತಾ ಬಂದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ನಡೆ ಮಾತ್ರ ಅಸ್ಪಷ್ಟವಾಗಿದೆ.
ಈ ಹದಗೆಟ್ಟ ರಸ್ತೆ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಅದೆಷ್ಟೋ ಬಾರಿ ಗುಡಗೇರಿ ಗ್ರಾಮಸ್ಥರು ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಇನ್ನು ರಸ್ತೆ ಹಾಳಾಗಿರೋದ್ರಿಂದ ನಿತ್ಯ ಗುಡಗೇರಿ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಯ ಶಾಲಾ ಕಾಲೇಜು ಮಕ್ಕಳು ಕೊಂಕಣ ಸುತ್ತಿ ತಮ್ಮೂರು ಸೇರುವ ಸ್ಥಿತಿ ನಿಜಕ್ಕೂ ಖೇದಕರ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/06/2022 06:48 pm