ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸಾಂಕೇತಿಕ ಉದ್ಘಾಟನೆ ಕಂಡ ಕ್ರೀಡಾ ಸಂಸ್ಥೆ; ಜನರಲ್ಲಿ ಉತ್ಸಾಹ ಬುಗ್ಗೆ

ಕ್ರೀಡೆ ಅಂದ್ರೇ ಸಾಕು, ಮಕ್ಕಳಿಂದ ಹಿಡಿದು ವಯಸ್ಕರೂ ಓಡೋಡಿ ಬರುವಂತಹ ವಾತಾವರಣ ಸೃಷ್ಟಿಯ ಕುಂದಗೋಳ ಪಟ್ಟಣದ ಜನರ ಬಹು ದಿನಗಳ ಕನಸು ಕುಂದಗೋಳ ಕ್ರೀಡಾ ಸಂಸ್ಥೆಯ ಸಾಂಕೇತಿಕ ಉದ್ಘಾಟನೆ ಇಂದು ನೆರವೇರಿತು.

ಕಳೆದ ಎರಡು ವರ್ಷಗಳಿಂದ ಯೋಜನೆ, ರೂಪುರೇಷೆ, ನಿರ್ಮಾಣ ಹಂತದಲ್ಲಿದ್ದ ಕ್ರೀಡಾ ಸಂಸ್ಥೆ ಇಂದು ಸುಸಜ್ಜಿತವಾಗಿ ನಿರ್ಮಾಣ ಆಗಿದ್ದು, ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಸ್ವಾಮೀಜಿ, ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ಅಭಿನವ ಕಲ್ಯಾಣಪುರ ಬಸವಣ್ಣನವರು ಹಾಗೂ ಮೌಲಾನ ಹಜರತ್ ಮಕಾಂದರ ಅವರ ಸಮಕ್ಷಮ ಉದ್ಘಾಟನೆ ಕಂಡಿತು.

ಇಂದು ಬೆಳಿಗ್ಗೆಯೇ ಕ್ರೀಡಾ ಸಂಸ್ಥೆಯಲ್ಲಿ ಹೋಮ ಹವನ ಹಾಗೂ ನವಗ್ರಹ, ವಿಘ್ನೇಶ್ವರನ ಪೂಜೆ ಕೈಗೊಳ್ಳಲಾಗಿದ್ದು, ಸರ್ವ ಶ್ರೀಗಳ ನೇತೃತ್ವದಲ್ಲಿ ಕ್ರೀಡಾ ಸಂಸ್ಥೆ ಪದಾಧಿಕಾರಿಗಳ ನಾಮಫಲಕ ಅನಾವರಣ ಮಾಡುವ ಮೂಲಕ ಕ್ರೀಡಾಸಂಸ್ಥೆಯನ್ನು ಸರಳವಾಗಿ ಶಾಸ್ತ್ರೋಕ್ತವಾಗಿ ಉದ್ಘಾಟನೆ ಮಾಡಿ ಸರ್ವ ಶ್ರೀಗಳಿಗೆ ಪಾದಪೂಜೆ, ಮೌಲಾನ ಹಜರತ್ ಮಕಾಂದರ ಅವರಿಗೆ ಗೌರವ ಸನ್ಮಾನ ಜರುಗಿತು.

ಈ ಸಂದರ್ಭದಲ್ಲಿ ಕುಂದಗೋಳ ಕ್ರೀಡಾ ಸಂಸ್ಥೆ ಸರ್ವ ಪದಾಧಿಕಾರಿಗಳು ಮತ್ತವರ ಕುಟುಂಬದವರು ಹಾಗೂ ಉತ್ಸಾಹಿ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/08/2022 04:40 pm

Cinque Terre

83.41 K

Cinque Terre

0

ಸಂಬಂಧಿತ ಸುದ್ದಿ