ಸ್ಮಾರ್ಟ್ ಸಿಟಿಯ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಕಸ ಸಂಗ್ರಹಣೆಗೆ ಆರ್.ಎಫ್.ಐ.ಡಿ ಟ್ಯಾಗ್ ಅಳವಡಿಕೆಯ ಯೋಜನೆ ಹಳ್ಳ ಹಿಡಿದಿರುವ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಕೂಡಲೇ ಅವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಆರ್.ಎಫ್.ಐ.ಡಿ ಟ್ಯಾಗ್ ದೂರುಗಳ ಬಗ್ಗೆ ಹಾಗೂ ಅವ್ಯವಸ್ಥೆಯ ವರದಿಯ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ಮನೆ ಮನೆಗೆ ನೀಡುವ ಕಸ ಸಂಗ್ರಹಣೆ ಡಬ್ಬಿಗಳ ಮೇಲೆ ಟ್ಯಾಗ್ ಅಳವಡಿಸಿ ಈ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಚನೆ ನೀಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸ್ಮಾರ್ಟ್ ಸಿಟಿಯ ಅವ್ಯವಸ್ಥೆ ಕುರಿತು ಸೂಚನೆ ನೀಡಿದ್ದು, 48 ಕೋಟಿಯ ಯೋಜನೆ ಹಳ್ಳ ಹಿಡಿದಿದೆ ಎಂಬ ವಿಸ್ತೃತ ವರದಿ ಮೂಲಕ ಸರ್ಕಾರದ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ವರದಿಯನ್ನು ವೀಕ್ಷಣೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕೂಡಲೇ ವ್ಯವಸ್ಥೆಯ ಸುಧಾರಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಾರ್ವಜನಿಕರ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಜನಪ್ರತಿನಿಧಿಗಳ ಗಮನಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸಿದ್ದು, ಪಬ್ಲಿಕ್ ನೆಕ್ಸ್ಟ್ ವರದಿ ವಿಸ್ತೃತಗೊಂಡ 48 ಗಂಟೆಯಲ್ಲಿಯೇ ಕೇಂದ್ರ ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/07/2022 08:12 pm