ನಮಸ್ಕಾರ ರೀ... ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹಂಗ ನಮ್ಮ ಪಂಚಾಯಿತಿ ಪಿಡಿಒ ಸಾಹೇಬರಿಗೂ ದೊಡ್ಡ ನಮಸ್ಕಾರೀ. ಅಂದಂಗ ನಿಮಗೇನ ಹೇಳಕ್ ಬಂದವರೆ ಅಂದರ ಭದ್ರಾಪುರ ಗ್ರಾಮ ಪಂಚಾತಿ ವ್ಯಾಪ್ತಿಯಲ್ಲಿ ಬರುವ ಮಜ್ಜಿಗುಡ್ಡ ಗ್ರಾಮದ ಅಂಬೇಡ್ಕರ್ ನಗರದ ರಸ್ತೆಗಳನ ನೋಡಿಲ್ಲ ಅಂದ್ರ ಸಾಹೇಬ್ರ ಒಮ್ಮೆ ನೋಡಿ ಬರೀ...
ನಮಗ್ ಅನಿಸಿದ ಪ್ರಕಾರ ನೀವು ನೋಡಿಲ್ಲ ಅಂತ ಕಾಣುತ್ತೀರಿ... ಸಾಹೇಬ್ರೆ ಯಾಕಂದ್ರೆ, ನೀವು ನೋಡಿ ಬಂದಿದ್ದರ ಆ ರಸ್ತೆಗಳ ಬಹಳ ಸ್ವಚ್ಛ ಇರುತ್ತಿತ್ತು ನೋಡ್ರಿ ಮತ್ತ.
ಸಾಹೇಬ್ರೆ ಸಾರ್ವಜನಿಕರ ಸೇರಿದಂತೆ ಅನೇಕರು ಕಸಾ ತಂದ ಹಾಕತಾರಿ ಈ ರಸ್ತೆಯ ಮೇಲೆ ಹೋಗಬೇಕಂದ್ರ ಮೂಗ ಮುಚ್ಚಿಕೊಂಡ ಹೋಗಬೇಕಾದ ದುಸ್ಥಿತಿ ಬಂದೈತ್ರಿ ಅಂತ ಅಲ್ಲಿನ ಸಾರ್ವಜನಿಕರು ಆರೋಪ ಮಾಡತರೀ ಸಾಹೇಬರ. ಇನ್ನ ಅಲ್ಲಿ ವಾಸ ಮಾಡೋರ ಜನರ ಸ್ಥಿತಿ ಏನ್ ಆಗ್ಬಾರ್ದು ನೀವೇ ಯೋಚನೆ ಮಾಡ್ರಿ.
ಮತ್ತೊಂದು ವಿಷಯ ಏನು ಅಂದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಕೂಡ ಇದ ಗ್ರಾಮದವರ ಅದರ ನೋಡ್ರಿ. ಈ ವಿಷಯ ಅವರ ಗಮನಕ್ಕೂ ಬಂದಿರಬಹುದು ಅಂತ ಅನುಕೊಂಡೆವೆ ನೋಡ್ರಿ ಸಾಹೇಬ್ರೆ.
ಏನಾರ ಆಗ್ಲಿ, ಸಾಹೇಬ್ರ ಎಲ್ಲರೂ ಕೂಡಿ ಈ ಕಸದ ವಿಷಯಕ್ಕೆ ಸಂಬಂಧಪಟ್ಟಗ ಏನಾದರೂ ಒಂದು ದಾರಿ ಮಾಡಿ ಅಲ್ಲಿನ ನಿವಾಸಿಗಳು ನಿಶ್ಚಿಂತೆಯಿಂದ ಇರೋ ಹಂಗ ಸಮಸ್ಯೆಯನ್ನು ಬಗೆಹರಿಸಿ ಅಂತ ಅಲ್ಲಿನ ನಿವಾಸಿಗಳ ಪರವಾಗಿ ಪಬ್ಲಿಕ್ ನೆಕ್ಸ್ಟ್ ಕಡೆಯಿಂದ ಕಳಕಳಿಯ ವಿನಂತಿ ಐತಿ ನೋಡ್ರಿ ಸಾಹೇಬ್ರ.
- ನಂದೀಶ್, ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/07/2022 03:32 pm