ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಗ್ರಾಮಸ್ಥರ ಹೋರಾಟಕ್ಕೆ ಒಲಿದ ಪಂಚಾಯ್ತಿ,ಅಭಿವೃದ್ಧಿ ಆಗಲಿ !

ಆ ಗ್ರಾಮದ ಜನರ ಹತ್ತು ಹಲವಾರು ವರ್ಷಗಳ ಹೋರಾಟದ ಫಲ, ಚುನಾವಣೆ ಬಹಿಷ್ಕಾರದ ಬಲ ಅಬ್ಬಾ ! ಅವರ‌ ಆ ಹೋರಾಟಕ್ಕೆ ಕೂನೆಗೂ ಜಯ ಸಿಕ್ಕಿದೆ.

ಹೌದು ! ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮಸ್ಥರು ಚಾಕಲಬ್ಬಿ ಗ್ರಾಮ ಪಂಚಾಯಿತಿಯಿಂದ ಪ್ರತ್ಯೇಕ ಗ್ರಾಮ ಪಂಚಾಯಿತಿಗೆ ಒತ್ತಾಯಿಸಿ ಮಾಡದ ಹೋರಾಟವಿಲ್ಲ, ಭೇಟಿಯಾಗದ ಜನಪ್ರತಿನಿಧಿಗಳು ಇಲ್ಲಾ. ಕಳೆದ ಹತ್ತು ವರ್ಷಗಳಿಂದ ಚಾಕಲಬ್ಬಿ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ವಿಷಯಕ್ಕೆ ಕಾಲಿಡದೆ ನಡೆಸಿದ ಅವಿರತ ನಡೆಗೆ ಬರದ್ವಾಡಕ್ಕೆ ನೂತನ ಗ್ರಾಮ ಪಂಚಾಯಿತಿ ಒಲಿದಿದೆ.

ಸದ್ಯ ಈ ಗ್ರಾಮ ಅಭಿವೃದ್ಧಿ ವಿಷಯದಲ್ಲಿ ಹಿನ್ನಡೆ ಅನುಭವಿಸಿದ್ದು, ಬರದ್ವಾಡ ಗ್ರಾಮಕ್ಕೆ ಸೂಕ್ತ ರಸ್ತೆ, ಸಮರ್ಪಕ ಚರಂಡಿ ವ್ಯವಸ್ಥೆ, ನಲ್ಲಿ ನೀರು, ಶುದ್ಧ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಸೇರಿದಂತೆ ಶಾಲೆಗಳ ಅಭಿವೃದ್ಧಿ ಆಗಬೇಕಿದ್ದು ನೂತನ ಪಂಚಾಯಿತಿ ಈ ಎಲ್ಲಾ ಬೇಡಿಕೆ ಈಡೇರಿಸಿದ್ರೇ ಗ್ರಾಮಸ್ಥರ ಹೋರಾಟ ಫಲದಾಯಕ ಎನ್ನಬಹುದು.

ನೂತನ ಗ್ರಾಮ ಪಂಚಾಯಿತಿ ಹಠಬಿದ್ದು ಪಡೆದು ಪಟಾಕಿ ಸಿಡಿಸಿ ಡೊಳ್ಳು ಬಾರಿಸಿದ ಗ್ರಾಮಸ್ಥರು ಅಭಿವೃದ್ಧಿಯನ್ನು ಹಠತೊಟ್ಟು ಪಡೆಯಲಿದ್ದಾರಾ ? ಎಂಬುದನ್ನು ಕಾದು ನೋಡಬೇಕಿದೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/07/2022 05:25 pm

Cinque Terre

134.1 K

Cinque Terre

1

ಸಂಬಂಧಿತ ಸುದ್ದಿ