ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮರೆಯಾಗದಿರಲಿ ಸಂಸ್ಕೃತಿ, ಆಚರಣೆ; ಲಂಬಾಣಿ ಕರಕುಶಲ ಕಲಾ ಕೇಂದ್ರಕ್ಕೆ ಚಾಲನೆ

ಬಂಜಾರಾ(ಲಂಬಾಣಿ) ಸಮುದಾಯ ಅಂದರೆ ಭಾರತೀಯ ಐತಿಹಾಸಿಕ ಪರಂಪರೆಗೆ ಸಾಕಷ್ಟು ಕೊಡುಗೆ ಕೊಟ್ಟಿರುವ ಸಮುದಾಯ. ಇಲ್ಲಿನ ಆಚರಣೆ, ಉಡುಗೆ ತೊಡುಗೆ ಸಾಕಷ್ಟು ಭಿನ್ನ, ವಿಶೇಷ.

ಈ ಸಮುದಾಯದ ಆಚರಣೆಗೆ ಉತ್ತೇಜನ ನೀಡುವ ಹಾಗೂ ಲಂಬಾಣಿ ಜನರ ಆರ್ಥಿಕ ಮಟ್ಟ ವೃದ್ಧಿಸಲು ಕೇಂದ್ರ ಸರ್ಕಾರ ವೋಕಲ್ ಪಾರ್ ಲೋಕಲ್ ಎಂಬ ಯೋಜನೆಯಂತೆ ʼವನ್ ಸ್ಟೇಷನ್... ವನ್ ಪ್ರಾಡಕ್ಟ್ʼ ಅಭಿಯಾನ ಆರಂಭಿಸಿ ಲಂಬಾಣಿಗಳ ಉತ್ಪನ್ನ ಮಾರಾಟ, ಪರಿಚಯಕ್ಕೆ ನೈಋತ್ಯ ರೈಲ್ವೆ ಕೈ ಜೋಡಿಸಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಸಂಡೂರಿನ ಲಂಬಾಣಿ ಕರಕುಶಲ ಕಲಾ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

ಇನ್ನೂ ಸಂಡೂರ ಲಂಬಾಣಿ ಕಸೂತಿ ಕಲಾ ಕೇಂದ್ರದ ಸ್ಟಾಲ್ ವೊಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಲೋಕಾರ್ಪಣೆಗೊಂಡಿದ್ದು, ಲಂಬಾಣಿ ಉಡುಪು, ಕನ್ನಡಿ, ನಾಣ್ಯಗಳು, ಚಿಪ್ಪು ಮೂಲಕ ಅಳವಡಿಸಿದ ಸಿದ್ಧ ಉಡುಪುಗಳನ್ನು ಇಲ್ಲಿಡಲಾಗಿದೆ. ಲಂಬಾಣಿ ಸಮುದಾಯದಲ್ಲಿ ತಮ್ಮ ಬಟ್ಟೆಗಳನ್ನು ತಾವೇ ಸಿದ್ಧ ಪಡಿಸಿಕೊಳ್ಳುತ್ತಾರೆ. ಆದರೆ, ಈಗ ಒತ್ತಡದ ಬದುಕಿನಲ್ಲಿ ಈ ವ್ಯವಸ್ಥೆ ಕಣ್ಮರೆಯಾಗುತ್ತಿದ್ದು, ಇಂತಹ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ.

ಒಟ್ಟಿನಲ್ಲಿ ಸರ್ಕಾರದ ಜೊತೆಗೆ ರೈಲ್ವೆ ಇಲಾಖೆಯೂ ಲಂಬಾಣಿ ಸಂಸ್ಕೃತಿಯ ಉಳಿವಿಗೆ ಕೈ ಜೋಡಿಸಿದ್ದು, ಅಳಿವಿನತ್ತ ಸಾಗುತ್ತಿರುವ ಆಚರಣೆಗೆ ಹೊಸ ಮೆರುಗು ನೀಡುತ್ತಿದೆ.

- ಮಲ್ಲೇಶ್ ಸೂರಣಗಿ ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/04/2022 04:18 pm

Cinque Terre

59.15 K

Cinque Terre

1

ಸಂಬಂಧಿತ ಸುದ್ದಿ