ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕುಂದಗೋಳ ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳಲ್ಲಿ 15 ಗ್ರಾಮ ಪಂಚಾಯಿತಿಯ 16 ಕೆರೆಗಳು ಅಮೃತ ಸರೋವರ ಯೋಜನೆಯಡಿ 39 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಆಗಲಿವೆ, ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ್ ಕುರಿಯವರ ಹೇಳಿದರು.
ಹೌದು ! ಆಜಾದಿ ಕಾ ಅಮೃತ ಮಹೋತ್ಸವ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ಒಟ್ಟು 39 ಲಕ್ಷ ವೆಚ್ಚದಲ್ಲಿ ಕೆರೆ ಹೂಳೆತ್ತಲು 10 ಲಕ್ಷ, ಕೆರೆಗೆ ನೀರು ಬರುವ ದಾರಿ ಇನ್ ಲೇಟ್ ಔಟ್ ಲೇಟ್ ಕಾಮಗಾರಿಗೆ 14 ಲಕ್ಷ ಸಸಿಗಳನ್ನು ನೆಡಲು 5 ಲಕ್ಷ, ಜಂಗಲ್ ಕಂಟಿಂಗ್ ಮಾಡಲು 20 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ ಎಂದರು.
ಅದರಂತೆ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಪತಿ ಹಾಗೂ ಮಕ್ಕಳು ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ದೂರ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಜಿಲ್ಲಾ ಪಂಚಾಯತಿಗೆ ಮಾಹಿತಿ ನೀಡಿ ಪತಿ ಹಸ್ತಕ್ಷೇಪ ಮಾಡುವಂತಹ ಮಹಿಳಾ ಸದಸ್ಯರ ಸದಸ್ಯತ್ವ ರದ್ದು ಮಾಡಲಾಗುವುದು ಎಂದರು.
Kshetra Samachara
18/08/2022 06:02 pm