ಪಬ್ಲಿಕ್ ನೆಕ್ಸ್ಟ್ ವಿಶೇಷ, ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ: ಜೀವನದಲ್ಲಿ ಸ್ವಂತದ ಸೂರು ಮಾಡಿಕೊಳ್ಳ ಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ,ಆದರೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಒಂದು ವರ್ಷದಿಂದ ಸಹಾಯಧನ ಬಿಡುಗಡೆಯಾಗದೇ ಬಡವರು ಪರದಾಡುವಂತಾಗಿದೆ.
ಕಲಘಟಗಿ ಪಟ್ಟಣದಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಮನೆ ನಿರ್ಮಾಣದ ಸಹಾಯ ಧನಕ್ಕೆ ಜಾತಕ ಪಕ್ಷಿಗಳಂತೆ ಕಾಯುವಂತಾಗಿದೆ.
ಕೇಂದ್ರ ಸರಕಾರ ಎಲ್ಲರಿಗೂ ವಸತಿ ಯೋಜನೆ ಅಡಿ ಪಟ್ಟಣ ಹಾಗೂ ನಗರ ವ್ಯಾಪ್ತಿಯಲ್ಲಿ ಬಡವರು ಮನೆ ನಿರ್ಮಿಸಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ಪರಿಚಯಿಸಿದ್ದು, ಫಲಾನುಭವಿಗಳಿಗೆ ಕೇಂದ್ರ ಒಂದೂವರೆ ಲಕ್ಷ ರೂ ಹಾಗೂ ರಾಜ್ಯ ಸರಕಾರ ವಾಜಪೇಯಿ ನಗರ ವಸತಿ ಯೋಜನೆಯ ಒಂದು ಲಕ್ಷ ಇಪ್ಪತ್ತು ಸಾವಿರ ರೂ.ಗಳ ಸಹಾಯಧನ ಬಿಡುಗಡೆಯಾಗದೇ ಮನೆ ನಿರ್ಮಾಣ ಅರ್ಧಕ್ಕೆ ನಿಂತಿವೆ.ಇನ್ನೂ ಕೆಲವರಿಗೆ ಒಂದು ಕಂತಿನ ಹಣ ಸಂದಾಯವಾಗಿ ಉಳಿದ ಹಣ ಸಂದಾಯವಾಗಿಲ್ಲ.
ಸಹಾಯಧನ ಬಿಡುಗಡೆ ಮಾಡಿ ಸರಕಾರ ಫಲಾನುಭವಿಗಳ ಹಿತ ಕಾಪಾಡುವಂತೆ ಫಲಾನುಭವಿ ವೀರಭದ್ರಯ್ಯ ಹುಬ್ಬಳ್ಳಿಮಠ ಪಬ್ಲಿಕ್ ನೆಕ್ಸ್ಟ್ ಗೆ ಅಳಲು ಹೇಳಿದರು.
ಇನ್ನಾದರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಹಾಯಧನ ಶೀಘ್ರ ಬಿಡುಗಡೆ ಮಾಡಿ ಬಡ ಫಲಾನುಭವಿಗಳಿಗೆ ಸೂರು ಕಲ್ಪಿಸುವುದೇ ಎಂಬುದನ್ನು ಕಾದುನೋಡ ಬೇಕಿದೆ.
Kshetra Samachara
16/12/2020 07:53 pm