ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಅಲ್ಲರೀ ಸರ್, ಒಂದು ವರ್ಷದೊಳಗ ರೋಡ್ ಹೆಂಗ್ ಕೆಡ್ತದ ಅಂತ ಹೇಳರಿ‌ ನೋಡೋಣ !

ಕಲಘಟಗಿ: ಒಂದು ವರ್ಷದೊಳಗ ರೋಡ್ ಹೆಂಗ್ ಕೆಡ್ತದ ಅಂತ ಹೇಳರಿ‌ ನೋಡೋಣ ! ಎಂದು ತಾಲೂಕಾ ಪಂಚಾಯತಿ ಅಧ್ಯಕ್ಷೆ ಸುನೀತಾ ಮ್ಯಾಗಿನಮನಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸ್ಥಳೀಯ ತಾ ಪಂ‌ ಸಭಾ ಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ರಸ್ತೆ ಹಾಳಾಗಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ.ಕೆಲವು ಕಡೆ ರಸ್ತೆ ಒಂದು ವರ್ಷದೊಳಗೆ ಹಾಳಾಗಿವೆ.ಗುಣಮಟ್ಟದ ಕೆಲಸ ಮಾಡದೇ ಹೋದರೆ ಅಂತವರು ಕೆಲಸ ಮಾಡುವುದೇ ಬೇಡ,ಅವರ ಬಿಲ್ ರದ್ದು ಮಾಡಿ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಬಾಗೆವಾಡಿ ಅವರನ್ನು ಅಧ್ಯಕ್ಷೆ ಸುನೀತಾ ಮ್ಯಾಗಿನಮನಿ ತರಾಟೆಗೆ ತೆಗೆದುಕೊಂಡರು.ಎಲ್ಲಾ‌ರಸ್ತೆ ಹದಗೆಟ್ಟು ಹೋಗ್ಯಾವ ಎಂದು ಉಪಾಧ್ಯಕ್ಷ ಚಂದ್ರಗೌಡ ಪಾಟೀಲ ಧ್ವನಿಗೂಡಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ ಸಿದ್ದಾಪುರಮಠ,ತಾ ಪಂ ಇ ಒ ಎಂ ಎಸ್ ಮೇಟಿ‌ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

21/11/2020 09:57 am

Cinque Terre

56.06 K

Cinque Terre

8

ಸಂಬಂಧಿತ ಸುದ್ದಿ