ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಕುಡಿಯುವ ನೀರಿನ ಕೆರೆ ಸುತ್ತ ಕುಡುಕರ ಹಾವಳಿ ಹೆಚ್ಚಾಗಿತ್ತು. ಜೊತೆಗೆ ಕೆರೆ ಸುತ್ತ ಕಸ ಬೆಳೆದ ಪರಿಣಾಮ ವಿಷ ಜಂತುಗಳು ವಾಸವಾಗಿ ಗ್ರಾಮದ ನಾಗಪ್ಪ ವೀರಭದ್ರಪ್ಪ ಕಮ್ಮಾರ ಎಂಬುವವರು ಕೆರೆಗೆ ನೀರು ತರಲು ಹೋದಾಗ ಹಾವು ಕಚ್ಚಿದ ಘಟನೆ ಎಲ್ಲರನ್ನು ಬೆಚ್ಚಿ ಬಿಳಿಸಿತ್ತು.
ಈ ಅವ್ಯವಸ್ಥೆ ಪಬ್ಲಿಕ್ ನೆಕ್ಸ್ಟ್ 'ಕೆರೆ ನೀರಿಗೆ ಬಂದವರಿಗೆ ವಿಷ ಜಂತು ಕುಡುಕರು ಕಾಟ' ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ಧಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಸುದ್ಧಿ ನೋಡಿದ ಅಧಿಕಾರಿಗಳು ಇಂದು ಬೆಳಂ ಬೆಳಿಗ್ಗೆಯೆ ಗಡೇನಕಟ್ಟಿ ಗ್ರಾಮದ ಕೆರೆ ಸುತ್ತ ಬೆಳೆದ ಹುಲ್ಲು ಕಸ ಗಟ್ಟಿಗಳನ್ನು ಕಿತ್ತು ಹಾಕುವ ಕಾರ್ಯ ಆರಂಭಿಸಿದ್ದು, ಕುಡುಕರ ಕಾಟ ತಡೆಯಲು ಕೆರೆ ಕಾಯಲು ಪಂಚಾಯ್ತಿ ಸಿಬ್ಬಂದಿ ನೇಮಿಸಿ ಹಾಳಾದ ಶುದ್ಧ ಕುಡಿಯುವ ನೀರಿನ ಘಟಕದ ಸುವ್ಯವಸ್ಥಿತ ಕ್ರಮಕ್ಕೆ ಮುಂದಾಗಿದ್ದಾರೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
12/11/2020 12:19 pm