ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸೌಲಭ್ಯ ಕೊಟ್ಟರೂ ಹಣವಿಲ್ಲ: ಇಲಾಖೆ ವಿರುದ್ಧ ರೈತರು ಗರಂ

ಕುಂದಗೋಳ: ತೋಟಗಾರಿಕೆ ಇಲಾಖೆಯಿಂದ ಖುಷಿಯಿಂದ ಸೌಲಭ್ಯ ಪಡೆದವರು ಇದೀಗ ಸೌಲಭ್ಯದ ಹಣವೇ ಬಂದಿಲ್ಲ ಎಂದು ಇಲಾಖೆಗೆ ಅಲೆದು ಅಲೆದು ಚಪ್ಪಲಿ ಸವೆಸಿ ಸುಸ್ತಾಗಿದ್ದಾರೆ.

ಕುಂದಗೋಳ ತಾಲೂಕಿನ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ 2021-22 ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಸೌಲಭ್ಯ ಪಡೆದ 45 ಫಲಾನುಭವಿಗಳಿಗೆ ಆ ಸೌಲಭ್ಯದ ಹಣ ಹತ್ತು ತಿಂಗಳೂ ಕಳೆದರೂ ಸಂದಾಯ ಆಗಿಲ್ಲ.

ಈಗಾಗಲೇ 2021-22ನೇ ಸಾಲಿನಲ್ಲಿ 28 ಈರುಳ್ಳಿ ಘಟಕ, 2 ವ್ಯಯಕ್ತಿಕ ಕೃಷಿಹೊಂಡ, 1 ಟ್ರ್ಯಾಕ್ಟರ್, 2 ಪ್ಯಾಕ್ ಹೌಸ್ ನಿರ್ಮಾಣ ಮಾಡಿಕೊಂಡ 45 ಫಲಾನುಭವಿಗಳಿಗೆ ಬರೋಬ್ಬರಿ 41 ಲಕ್ಷ 40 ಸಾವಿರ ರೂಪಾಯಿ ಹಣ ಸಂದಾಯವಾಗಿದ್ದು, ಆ ಹಣ ಇಂದಿಗೂ ಬರದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಹಣ ಬಾರದೇ ಇರುವ ಕಾರಣ ನಿತ್ಯ ಹಲವಾರು ರೈತರು ಇಲಾಖೆಗೆ ಬರೋದು ಅಧಿಕಾರಿಗಳ ಜೊತೆ ವಾಗ್ವಾದ ಮಾಡೋದು ಮೀತಿ ಮೀರಿದ್ದು ಇದರಲ್ಲಿ ಸಾಲಸೋಲ ಮಾಡಿ ಸೌಲಭ್ಯ ನಿರ್ಮಾಣ ಮಾಡಿದವರೇ ಹೆಚ್ಚಾಗಿದ್ದಾರೆ.

ಇದಲ್ಲದೆ 2022-23ರ ರಾಷ್ಟ್ರೀಯ ತೋಟಗಾರಿಕೆ ಸೌಲಭ್ಯಕ್ಕೆ ಅರ್ಜಿ ಆಹ್ವಾನ ಮಾಡಿದ್ರೂ, ಸರ್ಕಾರ ಆ ಕಾಮಗಾರಿ ಕೈಗೊಳ್ಳಲು ಇಂದಿಗೂ ವರ್ಕ್ ಆರ್ಡರ್ ನೀಡಿಲ್ಲ. ಒಟ್ಟಾರೆ ತೋಟಗಾರಿಕೆ ಇಲಾಖೆಗೆ ಸರ್ಕಾರ ಹಣ ನೀಡದ ಕಾರಣ ರೈತರು ಸ್ಥಳೀಯ ಅಧಿಕಾರಿಗಳ ಗರಂ ಆಗಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ: ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

11/10/2022 09:59 pm

Cinque Terre

44.6 K

Cinque Terre

2

ಸಂಬಂಧಿತ ಸುದ್ದಿ