ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ ಹೊಸ ರೈತ ಸಂಪರ್ಕ ಕೇಂದ್ರ ಆರಂಭ

ಕುಂದಗೋಳ: ನಮಸ್ಕಾರಿ ರೀ... ಕುಂದಗೋಳ ರೈತಾಪಿ ಮಂದಿ ಇನ್ನ ಮ್ಯಾಲ್ ನೀವ್ ಎಪಿಎಂಸ್ಯಾಗ ಇರೋ ಈ ಹಳೇ ರೈತ ಸಂಪರ್ಕ ಕೇಂದ್ರಕ್ಕೆ ಹೊಗ ಬ್ಯಾಡ್ರೀ ಪಾ, ಅಲ್ಲಿ ಹೋದ್ರೆ ನಿಮಗ್ ಕಚೇರಿ ಮತ್ ಅಧಿಕಾರಿ ಸಿಗಂಗಿಲ್ಲಾ !

ಏನ್ರೀ ಪಾ ? ಕಚೇರಿ ಎಲ್ಲಿ ಹೋತು ಅಂತಿರೇನು ? ನಿಮ್ಮ ಪಬ್ಲಿಕ್ ನೆಕ್ಸ್ಟ್ ಸತತ ವರದಿ ಫಲವಾಗಿ ರೈತ ಸಂಪರ್ಕ ಕೇಂದ್ರ ಅದೇ ಎಪಿಎಂಸ್ಯಾಗ ನಿರ್ಮಾಣ ಆಗಿರೋ ಹೊಸಾ ಕಚೇರಿಗೆ ಪಾದಾರ್ಪಣೆ ಮಾಡೇತಿ.

ರೀ ಕಳೆದ ಹಲವಾರು ದಿನಗಳಿಂದ ಹಳೇ ರೈತ ಸಂಪರ್ಕ ಕೇಂದ್ರದ ಬೀಜ ಗೊಬ್ಬರ ಕ್ರಿಮಿನಾಶಕ ಯಂತ್ರ ಇಲಿ ಕಡಿತಕ್ಕೆ ಹಾಳಾಗುವ ಬಗ್ಗೆ, ರೈತರಿಗೆ ಬೀಜ ಗೊಬ್ಬರದಲ್ಲಿ ವಿತರಣೆ ಸಮಸ್ಯೆಯ ಜೊತೆಗೆ ಅಧಿಕಾರಿಗಳಿಗೆ ಉಂಟಾಗುತ್ತಿರುವ ಇಂಟರ್ನೆಟ್, ಕಡತ ವಿಲೇವಾರಿ ಸಮಸ್ಯೆ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು.

ಇದಲ್ಲದೆ ನೂತನ ರೈತ ಸಂಪರ್ಕ ಕೇಂದ್ರ ಉದ್ಘಾಟನೆ ಆಗದಿರುವ ಬಗ್ಗೆ ಉದ್ಘಾಟನೆಯಾದ ಬಳಿಕ ಕಚೇರಿ ಆರಂಭವಾಗದಿರುವ ಬಗ್ಗೆ ಸತತ ಸುದ್ಧಿ ಮಾಡಿದ್ದೇವು.

ಈ ವರದಿ ಫಲವಾಗಿ ಇಂದು ನೂತನ ಕಚೇರಿಗೆ ರೈತ ಸಂಪರ್ಕ ಕಚೇರಿಗೆ ಪಾದಾರ್ಪಣೆ ಮಾಡಿದೆ.

ಒಟ್ಟಾರೆ ನೋಡ್ರಿ ರೈತಾಪಿ ಮಂದಿ ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ನಿಮಗೆ ಹೊಸಾ ಕಚೇರಿ ಭಾಗ್ಯ ಬಂದೈತಿ ಇದು ಅಧಿಕಾರಿ ಮತ್ತು ಜನರಲ್ಲಿ ಖುಷಿ ತಂದಿದೆ.

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

04/02/2022 02:26 pm

Cinque Terre

26.74 K

Cinque Terre

1

ಸಂಬಂಧಿತ ಸುದ್ದಿ