ಹುಬ್ಬಳ್ಳಿ : ನೋಡ್ರಿ ಮೊನ್ನೆ ತಾನೇ ನಾವು ಕಡಪಟ್ಟಿ ದೇಸಾಯಿ ಹೊಲದ ರಸ್ತೆ ಮತ್ತ್ ಸಂಶಿ ಹಿರೇಹರಕುಣಿ ರಸ್ತೆಗೆ ಹೊಂದಿಕೊಂಡಿರುವ ನೈಋತ್ಯ ರೈಲ್ವೆ ವಲಯದ ಡಬಲ್ ಹಳಿ ಕಾಮಗಾರಿ ಸಂಬಂದ ರೈಲ್ವೆ ಇಲಾಖೆಯ ಬ್ರಿಡ್ಜ್ ನಿರ್ಮಾಣದಿಂದ ಆದಂತ ಸಮಸ್ಯೆ ಬಗ್ಗೆ ವರದಿ ಮಾಡೇವಿ ಈಗ ಹಂತಾದ ಮತ್ತೊಂದು ಸಮಸ್ಯೆ ಹಳ್ಯಾಳ ಗ್ರಾಮಸ್ಥರಿಗೆ ಕಂಟಕ ಆಗಿ ಕಾಡಕತ್ತೇತಿ ನೋಡ್ರಿ ಪಾ.
ಇದೋ ಈ ರಸ್ತೆ ಹುಬ್ಬಳ್ಳಿ ತಾಲೂಕು ಹಳ್ಯಾಳದಿಂದ ಅದರಗುಂಚಿಗೆ ಸಂಪರ್ಕ ಮಾಡೋ ರಸ್ತೆಗೆ ಹೊಂದಿಕೊಂಡಿರುವ ಬ್ರೀಡ್ಜ್ ಸಲುವಾಗಿ ಸಾಕಾಗಿ ಈ ಮಂದಿ ಈ ರಸ್ತೆದಾಗ ಹಾಯೋದ್ ಬಿಡಬೇಕ್ ಅಂತ ಮಾಡ್ಯಾರಾ ಯಾಕಂದ್ರೆ ಮೊಣಕಾಲುದ್ದ ರಾಡ್ಯಾಗ ಅವ್ರಿಗೂ ಅಡ್ಯಾಡಿ ಸಾಕಾಗಿ ಹೋಗೆತಿ ಇನ್ನ ಈ ಟ್ರ್ಯಾಕ್ಟರ್, ಬೈಕ್ ಇತರೆ ವಾಹನ ಸಂಚಾರಕ್ಕೆ ಈ ಬ್ರಿಡ್ಜ್ ಮಾರಕವಾಗಿ ಕೃಷಿ ಚಟುವಟಿಕೆಗೂ ಅಡೆತಡೆ ಮಾಡೈತಿ.
ಎಲ್ಲಾ ಕಡೆ ಬರದಂಗ ಈ ಬ್ರಿಡ್ಜ್ ಗೂ ಇಲ್ಲಿ ನೀರು ಶೇಖರಣೆಯಾದಲ್ಲಿ ಸಂಪರ್ಕಿಸಿರಿ ಅಂತ್ಹೇಳಿ ಪೋನ್ ನಂಬರ್ ಬರದಾರ ಆ ನಂಬರಿಗೆ ಕರೆ ಮಾಡಿದ್ರ ಯಾರ್ದು ಪ್ರತಿಕ್ರಿಯೆ ರೈತರಿಗೆ ಇಲ್ಲಿವರೆಗೂ ಸಿಕ್ಕಿಲ್ಲಾ, ಈ ಬ್ರಿಡ್ಜ್ ಒಳಗ ನಿತ್ತಂತಹ ನಿರಾಗ ಈ ಗಾಡಿ ಚಕ್ಕಡಿ ಮಂದಿ ಹೇಂಗೊ ರಾಡ್ಯಾಗ ಒದ್ದಾಡಿ ದಾಟಿ ಆ ಕಡೆ ದಾರಿ ಹಿಡಿದ್ರ ಹೊಲಕ್ಕ ಹೋಗೋ ಪಾದಚಾರಿಗಳು ದಿನಾ ರೈಲ್ವೆ ಹಳಿ ಹತ್ತಿ ಇಳಿದು ಹೊಗತಾರ ಈ ಬಗ್ಗೆ ರೈತರು ಸಮಸ್ಯೆನಾ ಯಾರಿಗೂ ಹೇಳುನು ಯಾರಿಗೆ ಹೇಳಿದ್ರೂ ಇದುವರೆಗೆ ರೈಲ್ವೆ ಡಿಪಾರ್ಟ್ಮೆಂಟ್ ಕೆಲ್ಸಾ ಅಂತಾರ ಆದ್ರ ಈ ರೈಲೈ ಡಿಪಾರ್ಟ್ಮೆಂಟ್ ಮಂದಿ ಈ ರೈತರಿಗೆ ಕೈಗೆ ಬರೋಬ್ಬರಿ 3 ವರ್ಷ ಕಳದ್ರೂ ಇನ್ನೂ ಸಿಕ್ಕಿಲ್ಲಂತ ನೋಡ್ರಣ್ಣ.
Kshetra Samachara
20/10/2020 06:33 pm