ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜನವರಿ ಅಂತ್ಯಕ್ಕೆ ಸಿದ್ಧಗೊಳ್ಳಲಿದೆ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರ್ಮ್: ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ

ಹುಬ್ಬಳ್ಳಿ:ನೈಋತ್ಯ ರೈಲ್ವೆ ವಲಯದ‌ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ವಿಶ್ವದ ಉದ್ದನೆಯ ಪ್ಲಾಟ್ ಪಾರ್ಮ್ ಕಾರ್ಯ ಚುರುಕುಗೊಂಡಿದ್ದು,ಜನೆವರಿ ಅಂತ್ಯದಲ್ಲಿ ಪೂರ್ಣಗೊಳ್ಳುವ ಮೂಲಕ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ರೈಲ್ವೆ ನಿಲ್ದಾಣ ವಿಶ್ವದ ಅತಿ ಉದ್ದದ ಪ್ಲಾಟ್ ಫಾರ್ಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನಗರದ ರೈಲು ನಿಲ್ದಾಣದಲ್ಲಿ ಈಗಿರುವ ಪ್ಲಾಟ್‌ ಫಾರ್ಮ್‌ ಉದ್ದವನ್ನು ಹೆಚ್ಚಿಸಲಾಗುತ್ತಿದ್ದು, 2021ರ ಜನವರಿ ಅಂತ್ಯದ ವೇಳೆಗೆ ಹುಬ್ಬಳ್ಳಿಯಲ್ಲಿ ವಿಶ್ವದಲ್ಲೇ ಉದ್ದನೆಯ ರೈಲ್ವೆ ಪ್ಲಾಟ್‌ ಫಾರ್ಮ್‌ ಸಿದ್ಧಗೊಳ್ಳಲಿದೆ. ಈಗಿರುವ ಒಂದನೇ ಪ್ಲಾಟ್‌ಫಾರ್ಮ್‌ 550 ಮೀಟರ್‌ ಉದ್ದವಿದ್ದು, ಇದನ್ನು ಮೊದಲು 1,400 ಮೀಟರ್‌ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿತ್ತು. ನೈರುತ್ಯ ರೈಲ್ವೆಯು ಈಗ ಇದರ ಉದ್ದವನ್ನು 1,505 ಮೀಟರ್‌ಗೆ ಹೆಚ್ಚಿಸಲು ಮುಂದಾಗಿದೆ.

ಈಶಾನ್ಯ ರೈಲ್ವೆಯ ಪ್ರಧಾನ ಕಚೇರಿ ಹೊಂದಿರುವ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 1,366 ಮೀಟರ್‌ ಉದ್ದದ ಪ್ಲಾಟ್‌ಫಾರ್ಮ್‌ ಇದ್ದು, ಇದು ಸದ್ಯಕ್ಕೆ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್‌ ಎನ್ನುವ ಹೆಗ್ಗಳಿಕೆ ಹೊಂದಿದೆ. 2013ರಲ್ಲಿ ನವೀಕರಣ ಮಾಡಿದ್ದಾಗ ಉದ್ದದ ಪ್ಲಾಟ್ ಫಾರ್ಮ್‌ ಎಂದು ಘೋಷಣೆಯಾಗಿತ್ತು. ಹುಬ್ಬಳ್ಳಿಯಲ್ಲಿನ ಕಾಮಗಾರಿ ಪೂರ್ಣಗೊಂಡರೆ ಈ ಗೌರವ ವಾಣಿಜ್ಯ ನಗರಿ ಪಾಲಾಗಲಿದೆ.

Edited By : Manjunath H D
Kshetra Samachara

Kshetra Samachara

31/10/2020 08:56 am

Cinque Terre

45.38 K

Cinque Terre

22

ಸಂಬಂಧಿತ ಸುದ್ದಿ