ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಶಾಸಕರೇ....ಅಧಿಕಾರಿಗಳೆ... ಒಮ್ಮೆ ಆದ್ರೂ ನಮ್ಮ‌ಊರಿಗೆ ಬಂದು ನಮ್ಮ ಪರಿಸ್ಥಿತಿ ನೋಡ್ರಿ

ಲಕ್ಷ್ಮೇಶ್ವರ: ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಆದರಹಳ್ಳಿ ಗ್ರಾಮದ ವಡ್ಡರ್ ಪಾಳ್ಯದ ಸಾರ್ವಜನಿಕರ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದ ಪರಿಣಾಮ ರಾತ್ರಿ ಇಡಿ ನಿದ್ದೆಯಿಲ್ಲದೆ ಮಳೆಯ ನೀರನ್ನು ಹೊರಹಾಕಿದ್ದಾರೆ.

ಆದರಹಳ್ಳಿ ಗ್ರಾಮದ ವಡ್ಡರ ಪಾಳ್ಯಕ್ಕೆ ಗ್ರಾಮ ಪಂಚಾಯಿತಿಯಿಂದ ಆಗಲಿ ಅಥವಾ ಶಾಸಕರು ಆಗಲಿ ಯಾರಿಂದಲೂ ಕೆಲಸವಾಗಿಲ್ಲ ಎಲ್ಲಾ ಓಣಿಯಲ್ಲಿಯೂ ಸರಿಯಾದ ರಸ್ತೆಯಿಲ್ಲ ಸರಿಯಾದ ದಾರಿಯಿಲ್ಲ ಮಳೆಯಿಂದ ಆ ನೀರು ಮನೆಗಳಿಗೆ ನುಗ್ಗುತ್ತದೆ ನಮ್ಮ ಸಮಸ್ಯೆಗಳನ್ನು ಶಾಸಕರಿಗೆ ಎರಡು ಮೂರು ಸಾರಿ ಮನವಿ ಮೂಲಕ ಹೇಳಿದರು.

ಸ್ಪಂದನೆ ಮಾಡುತ್ತಿಲ್ಲ ಎಂದು ವಡ್ಡರ್ ಪಾಳ್ಯದ ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ನಮ್ಮ ಗ್ರಾಮ ಪಂಚಾಯತಿಯಪಿಡಿಒಗೆ ಹೇಳಿದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಹಾಗೂ ಪಿಡಿಯೂ ಅವರು ಗ್ರಾಮ ಪಂಚಾಯತಿಗೆ ಬರುವುದಿಲ್ಲ ನಮ್ಮ ಆದರಹಳ್ಳಿ ಗ್ರಾಮದ ಭೋವಿ ಸಮಾಜದ ಎಲ್ಲಾ ಓಣಿಯಲ್ಲಿಯೂ ಮೂಲ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ ಇಷ್ಟೆಲ್ಲ ಇದ್ದರು ಶಾಸಕರುಗಳಾಗಲಿ, ಅಧಿಕಾರಿಗಳಾಗಲಿ ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ನಮ್ಮ ವಡ್ಡರ ಪಾಳ್ಯ ಓಣಿಗೆ ಒಮ್ಮೆ ಬಂದು ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಅನೇಕ ಓಣಿಯ ರಸ್ತೆಗಳು ತಗ್ಗುಗುಂಡಿಗಳಿಂದ ಕೂಡಿದ್ದು ಸರಾಗವಾಗಿ ನೀರು ಹೋಗಲು ಜಾಗವಿಲ್ಲದೆ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದರೆ ನೀರು ಹರಿದು ಹೋಗಲು ಚರಂಡಿಯ ವ್ಯವಸ್ಥೆ ಇಲ್ಲದೇ ಮನೆಗೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತದೆ‌ ಎಂದು ಸಾರ್ವಜನಿಕರು ಅಳುತ್ತಲೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

22/10/2020 03:03 pm

Cinque Terre

24.47 K

Cinque Terre

2

ಸಂಬಂಧಿತ ಸುದ್ದಿ