ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಬಾಯಾರಿಕೆ ಆಯಿತಪ್ಪಾ ಅಂದ್ರೇ ಈ ಗ್ರಾಮದ ಜನಾ ನೀರು ಕುಡಿಯಲು 5 ಕಿ.ಮೀ ದಾರಿ ಸವೆಸಿ ಕುಂದಗೋಳ ಸೆರ್ಬೇಕು ನೋಡಿ ಇಂತಹದೊಂದು ಗ್ರಾಮದ ಹೆಸರೇ ಬಿಳೇಬಾಳ ಇಲ್ಲಿನ ಶುದ್ಧ ನೀರಿನ ಘಟಕ ಹಾಳಾದ ಪರಿಣಾಮ ಮರಳಿ ದುರಸ್ತಿ ಕಾಣದೆ ಈ ಅವಸ್ಥೆಗೆ ಜನ ಬಂದಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 1500 ಜನಸಂಖ್ಯೆ 1040 ಮತದಾರರನ್ನು ಹೊಂದಿರುವ ಬಿಳೇಬಾಳ ಗ್ರಾಮ ಅಭಿವೃದ್ಧಿಯಿಂದ ದೂರ ಸರಿದಿದ್ದು ಗ್ರಾಮದ ಕುಡಿಯುವ ನೀರಿನ ಕೆರೆ ಸಂಪೂರ್ಣ ಕಲುಷಿತ ನೀರು ತುಂಬಿದ್ದರೆ ಗ್ರಾಮಕ್ಕೆ ಸಂಪೂರ್ಕ ಕಲ್ಪಿಸುವ ಕೇವಲ 1ಕಿ.ಮೀ ರಸ್ತೆ ರಾಡಿ ಕೆಂಪು ಮಣ್ಣು ತುಂಬಿ ಸಂಚಾರಕ್ಕೆ ಮಾರಕವಾಗಿದ್ದು ಇಂದಲ್ಲ ಎಂದು ಅಭಿವೃದ್ಧಿ ಕಂಡಿಲ್ಲ.
Kshetra Samachara
18/10/2020 11:02 am