ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಗ್ರಾಮಸ್ಥರಿಗೆ ಸಸಿ ವಿತರಿಸುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶ್ರೀ ಅಷ್ಟ ವಿನಾಯಕ ಯುವಕ ಮಂಡಳದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಗುರು-ಹಿರಿಯರು ಪರಿಸರ ಸಂರಕ್ಷಣೆ ಹಾಗೂ ಗಿಡ ಬೆಳೆಸುವ ಮಹತ್ವದ ಕುರಿತು ತಮ್ಮ ಸಲಹೆ- ಅಭಿಪ್ರಾಯ ಹಂಚಿಕೊಂಡರು. ನಂತರ ಅರಣ್ಯ ಇಲಾಖೆಯಿಂದ ನೀಡಲಾದ ಗಿಡಗಳನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು.
Kshetra Samachara
05/06/2022 04:04 pm