ಕುಂದಗೋಳ : ಪಶುಪತಿಹಾಳದಿಂದ ಲಕ್ಷ್ಮೇಶ್ವರ ಮತ್ತು ಸಂಶಿ ಗ್ರಾಮಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಸೇವೆ ಇಲ್ಲದಿರುವುದನ್ನು ಖಂಡಿಸಿ ನೂರಾರು ವಿದ್ಯಾರ್ಥಿಗಳು ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಬಳಿ ಪಶುಪತಿಹಾಳದಲ್ಲಿ ರಸ್ತೆಗೆ ಚಕ್ಕಡಿ ಅಡ್ಡ ನಿಲ್ಲಿಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.
ಹೌದು ! ಮೂರ್ನಾಲ್ಕು ದಿನಗಳ ಹಿಂದೆ ಪ್ರತಿಭಟನೆ ಮಾಡಿದಾಗ ಲಕ್ಷ್ಮೇಶ್ವರ ಘಟಕ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯವರು ಸಾರಿಗೆ ಸೇವೆ ನೀಡುವುದಾಗಿ ಆಶ್ವಾಸನೆ ನೀಡಿದ್ದರು.
ಪುನಃ ಇದುವರೆಗೂ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವದರಿಂದ ರೋಷಿಹೋದ ವಿದ್ಯಾರ್ಥಿಗಳು ಮುಂಜಾನೆ ಹಠಾತ್ ಪ್ರತಿಭಟನೆ ಕೈಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗುಡಗೇರಿ ಪೊಲೀಸ್ ಅಧಿಕಾರಿಗಳು ಹಾಗೂ ಸಾರಿಗೆ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಸಾರಿಗೆ ಬಸ್ ಸೇವೆ ಒದಗಿಸುವ ಭರವಸೆ ನೀಡಿ ಪ್ರತಿಭಟನೆ ಶಾಂತಗೊಳಿಸಿದರು.
Kshetra Samachara
24/09/2022 04:38 pm