ಕುಂದಗೋಳ: ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಂದ್ರೆ, ಸಿ.ಎಸ್.ಆರ್ ಯೋಜನೆಯಡಿ ನಿರ್ಮಾಣವಾದ ಡಿಜಿಟಲ್ ವೇದಾಂತ್ ಅಂಗನವಾಡಿ ಕಟ್ಟಡವೊಂದು ಸದ್ಯ ಕೇಂದ್ರ ಸಚಿವರ ದಾರಿ ಕಾಯುತ್ತಿದೆ.
ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಿರ್ಮಾಣವಾದ ನೂತನ ಅಂಗನವಾಡಿ ಕಟ್ಟಡಕ್ಕೆ ಆರು ತಿಂಗಳು ಕಳೆದರೂ ಇಂದಿಗೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. ಇದರಿಂದಾಗಿ ಗುಡೇನಕಟ್ಟಿ ಗ್ರಾಮದ ನಂಬರ್ ಒಂದರ ಅಂಗನವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ಕೊಠಡಿಯಲ್ಲಿ ಪಾಠ ಮುಂದುವರೆಸಿದ್ದಾರೆ. ಆದರೆ ಈ ಕಟ್ಟಡ ಹಳೆಯದಾದ ಕಾರಣ ಸಿಮೇಂಟ್ ಮೇಲ್ಪದರು ಕೀಳುತ್ತಲಿದ್ದು, ಮಕ್ಕಳ ಪಾಠಕ್ಕೆ ಅಡುಗೆ ಸಾಮಗ್ರಿ ಸಂಗ್ರಹಕ್ಕೆ ಊಟ ಬಡಿಸಲು ಅನಾನುಕೂಲವಾಗಿದೆ.
ಸದ್ಯ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಉದ್ಘಾಟನೆ ಕಾಣಬೇಕಿದ್ದು, ಸಮಯದ ಹೊಂದಾಣಿಕೆ ಕಾರಣ ವೇದಾಂತ್ ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಆರು ತಿಂಗಳು ಕಳೆದರೂ ಉದ್ಘಾಟನೆ ವಿಳಂಬವಾಗಿ ಮಕ್ಕಳ ಪಾಠಕ್ಕೆ ಪ್ರಯೋಜನವೇ ಇಲ್ಲದಾಗಿದೆ.
ಒಟ್ಟಾರೆ ಸರ್ಕಾರವೇ ಕೊಟ್ಟಂತಹ ಸೌಲಭ್ಯವೊಂದು ಉದ್ಘಾಟನೆ ಕಾಣದೆ ಸಮಯ ಕಳೆಯುತ್ತಿದ್ದು, ಒಟ್ಟು 32 ಮಕ್ಕಳಿಗೆ ವೇದಾಂತ ಡಿಜಿಟಲ್ ಅಂಗನವಾಡಿ ಸೌಕರ್ಯ ಮತ್ತು ಪಾಠದಿಂದ ದೂರವೇ ಉಳಿದಿದ್ದು ಕೇಂದ್ರ ಸಚಿವರು ಈ ಕಟ್ಟಡದ ಉದ್ಘಾಟನೆಗೆ ಮುಂದಾಗಬೇಕಿದೆ.
ವರದಿ: ಶ್ರೀಧರ ಪೂಜಾರ
Kshetra Samachara
19/08/2022 01:32 pm