ಹುಬ್ಬಳ್ಳಿ: ಸುಮಾರು 35 ವರ್ಷಗಳ ಕಾಲವಿದ್ದ ಹಿಂದುಳಿದ ಮಕ್ಕಳ ಹಾಸ್ಟೆಲ್ ಅನ್ನು ಸದ್ಯ ಅಧಿಕಾರಿಗಳು ಎತ್ತಂಗಡಿ ಮಾಡುತ್ತಿದ್ದಾರೆ. ಇದು ಬಡ ಮಕ್ಕಳ ಜೀವನದಲ್ಲಿ ಆಟವಾಡಿದಂತೆ ಎಂದು ಹುಬ್ಬಳ್ಳಿ ತಾಲ್ಲೂಕಿನ ರಾಯನಾಳ ಗ್ರಾಮದ ಗ್ರಾಮಸ್ಥರು ಅಧಿಕಾರಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.
ರಾಯನಾಳ ಗ್ರಾಮದಲ್ಲಿನ ಹಿಂದೂಳಿದ ಮಕ್ಕಳ ವಸತಿ ನಿಲಯವನ್ನು ಏಕಾಏಕಿ ಅಧಿಕಾರಿಗಳು ಸ್ಥಳಾಂತರ ಮಾಡುವುದಕ್ಕೆ ಮುಂದಾಗಿದ್ದಾರೆ. ಇದನ್ನು ವಿರೋಧಿಸಿ ಗ್ರಾಮಸ್ಥರು ನಡು ರಸ್ತೆ ಮುಂದೆ ಟೆಂಟ್ ಹೊಡೆದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಈ ಹಾಸ್ಟೆಲ್‌ಗೆ ಸಂಬಂಧಿಸಿದಂತೆ ಎಲ್ಲ ಮೂಲಭೂತ ಸೌಕರ್ಯಗಳು ಇವೆ. ಅಷ್ಟೇ ಅಲ್ಲದೆ ಮಕ್ಕಳು ಕೂಡ ಇದ್ದಾರೆ. ಯಾಕೆ ಈ ವಸತಿ ನಿಲಯವನ್ನು ಸ್ಥಳಾಂತರ ಮತ್ತು ರದ್ದು ಮಾಡುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
05/06/2022 10:39 am