ಧಾರವಾಡ: ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರಿಗೆ ಅನ್ಯಾಯ ಎಸಗಿದ ಮುಖ್ಯೋಪಾಧ್ಯಾಯನ ಮೇಲೆ, ಕ್ರಮ ಕೈಗೊಳ್ಳದ ಡಿಡಿಪಿಐ ವಿರುದ್ಧ, ಕುರುವಿನಕೊಪ್ಪ ಗ್ರಾಮದ ಕೆಲ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಡಿಡಿಪಿಐ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಮುಖ್ಯೋಪಾಧ್ಯಾಪಕ ಎಸ್.ಎಫ್.ಪಾಟೀಲ ಎಂಬಾತ ಅದೇ ಶಾಲೆಯಲ್ಲಿನ ಶಿಕ್ಷಕಿಯೊಬ್ಬರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಸಂಬಂಧ ಮೂರ್ನಾಲ್ಕು ಬಾರಿ ಡಿಡಿಪಿಐ ಅವರಿಗೆ ಮನವಿ ಕೂಡ ಸಲ್ಲಿಸಿದ್ದೇವೆ. ಅವರು ಮುಖ್ಯೋಪಾಧ್ಯಾಪಕರ ಮೇಲೆ ಕ್ರಮ ಕೈಗೊಳ್ಳದೇ ಇದ್ದಾಗ ಉಪವಾಸ ವೃತ ಕೂಡ ಮಾಡಲಾಗಿತ್ತು. ಆಗ ಇದಕ್ಕೆ ಸ್ಪಂದಿಸಿದ್ದ ಡಿಡಿಪಿಐ ಮುಖ್ಯೋಪಾಧ್ಯಾಪಕನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ್ದರು.
ಆದರೆ, ಒಂದು ತಿಂಗಳಾದರೂ ಆ ಮುಖ್ಯೋಪಾಧ್ಯಾಪಕ ಇನ್ನೂ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಇದುವರೆಗೂ ಡಿಡಿಪಿಐ ಆ ಮುಖ್ಯೋಪಾಧ್ಯಾಪಕನ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಡಿಡಿಪಿಐ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗಿದೆ
Kshetra Samachara
20/04/2022 04:24 pm