ಕುಂದಗೋಳ : ಏನ್ರೀ ಸಾರಿಗೆ ಅಧಿಕಾರಿಗಳೇ ಹಾಗೂ ಮಾನ್ಯ ಶಾಸಕರೇ ನಿಮ್ಮ ತಾಲೂಕು ಕುಂದಗೋಳದಾಗ ಅದೆಷ್ಟರ ಸಾರಿಗೆ ಸಮಸ್ಯೆ ಐತ್ರೀ ಪಾ ದಯವಿಟ್ಟು ಗಮನಸ್ರೀ.
ಹೌದರೀ ! ಕಳೆದ ಹಲವಾರು ದಿನಗಳಿಂದ ತಮ್ಮೂರಿಗೆ ಸರಿಯಾದ ಸಾರಿಗೆ ಸೌಲಭ್ಯ ಇಲ್ಲದ್ದಕ್ಕ ದಾರಿಲೀ ಹೊಗೋ ಬೈಕ್, ಕಾರು, ಟ್ರ್ಯಾಕ್ಟರ್, ಅಷ್ಟ ಯಾಕ್ರೀ ಈ ಲಾರಿಗೆ ಕೈ ಮಾಡಿ ಸಂಶಿ ಕ್ರಾಸ್'ನಿಂದ ತಮ್ಮೂರು ಚಾಕಲಬ್ಬಿ ಸೇರಿದ ವಿದ್ಯಾರ್ಥಿಗಳು ಇವತ್ತ ನಮ್ಮೂರಿಗೆ ಸರಿಯಾದ ಬಸ್ ಬಿಡ್ರೀ ಅಂತ್ಹೇಳಿ ಸಂಶಿ ಬಸ್ ನಿಲ್ದಾಣದಾಗ ಪ್ರತಿಭಟನೆ ಮಾಡ್ಯಾರ ನೋಡ್ರಿ.
ಇಲ್ಲೇ ಕೇಳ್ರಿ ಜನಪ್ರತಿನಿಧಿಗಳೇ ಸಾರಿಗೆ ಅಧಿಕಾರಿಗಳೇ ಮಕ್ಕಳ ತಮ್ಮ ಪರಿಸ್ಥಿತಿ ಹೇಳ್ಯಾರ !.
ನೋಡ್ರಿ ಪಾಪಾ, ಇಂತಹ ಸಾರಿಗೆ ಸಮಸ್ಯೆ ನಡುವೆ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆ ಕಾಲೇಜು ತಲಪೋದು ಹೇಂಗ್ ಅಂತ್ಹೇಳಿ, ಅದಕ್ಕೆ ದಿಡೀರ್ ಅಂತ ಪ್ರತಿಭಟನೆ ಚಾಲೂ ಮಾಡ್ಯಾರ ಈ ಪ್ರತಿಭಟನೆಯನ್ನ ಕುಂದಗೋಳ ಗ್ರಾಮೀಣ ಪೊಲೀಸರು ಬಂದು ಸಮಾಧಾನ ಮಾಡಿ ಸರಿಯಾದ ಸಾರಿಗೆ ಒದಗಿಸುವ ಆಶ್ವಾಸನೆ ಕೊಟ್ಟಾರ್. ಅದು ಈಡೇರಿತ್ತೋ ಇಲ್ಲೋ ಗೊತ್ತಿಲ್ಲಾ.
ದಯವಿಟ್ಟು ಮಾನ್ಯ ಶಾಸಕರು ಹಾಗೂ ಸಾರಿಗೆ ಅಧಿಕಾರಿಗಳೇ ನೀವೊಮ್ಮೆ ಚಾಕಲಬ್ಬಿಗೆ ಬಸ್ಸಿಗೆ ಬರ್ರೀ. ಈ ಸಮಸ್ಯೆ ನೋಡ್ರಿ ಸಾರಿಗೆ ಬಸ್ ಹೆಚ್ಚು ಮಾಡ್ರೀ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
29/01/2022 07:39 am