ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕ್ಷೇತ್ರ ಶಿಕ್ಷಣಾಧಿಕಾರಿಗಳೇ ತಾಪಂ ಅಧಿಕಾರಿಗಳೇ ಸಮಸ್ಯೆ ಗಮನಿಸಿ

ಕುಂದಗೋಳ : ಕ್ಷೇತ್ರ ಶಿಕ್ಷಣಾಧಿಕಾರಿಗಳೇ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೇ ನೀವೂ ಈ ಸಮಸ್ಯೆಗೆ ಪರಿಹಾರ ಕೊಡಲೇಬೇಕು ನೋಡ್ರಿ.

ಏನಿದು ಸಮಸ್ಯೆ ಅಂದ್ರಾ ? ಸ್ವಾಮಿ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆ ಆವರಣದಲ್ಲಿ ಇರುವಂತಹ ಕುಡಿಯುವ ನೀರಿನ ಟ್ಯಾಂಕರ್ ನಾಲ್ಕು ವರ್ಷಗಳಿಂದ ಸ್ವಚ್ಚ ಮಾಡಿಲ್ಲ.

ಟ್ಯಾಂಕರ್ ಸುತ್ತ ಅನೈರ್ಮಲ್ಯ ತುಂಬಿ ನೀರಿನಲ್ಲಿ ಹುಳ ಬರುತ್ತಿವೆ, ಈ ಬಗ್ಗೆ ಸ್ವತಃ ಗ್ರಾಮ ಪಂಚಾಯಿತಿ ಸದಸ್ಯರೇ ಇದರ ಸ್ವಚ್ಚತೆಗೆ ಸೂಚಿಸಿದ್ರೂ ಗ್ರಾಪಂ ಅಧಿಕಾರಿ, ಸಿಬ್ಬಂದಿ ಆ ಕೆಲಸ ಮಾಡಿಲ್ಲವಂತೆ.

ಇದೀಗ ಗ್ರಾಮ ಪಂಚಾಯಿತಿ ಸದಸ್ಯರೇ ಶಾಲಾ ಮಕ್ಕಳ ಸಮ್ಮುಖದಲ್ಲಿ ಸಮಸ್ಯೆ ಏನು ಎಂಬುದನ್ನು ಹೇಳಿದ್ದಾರೆ ಕೇಳಿ.

ಕೇಳಿದ್ರಲ್ಲಾ ಅಧಿಕಾರಿಗಳೇ, ಇಂತಹ ಅನೈರ್ಮಲ್ಯದ ಟ್ಯಾಂಕರ್ ಒಳಗಿನ ನೀರನ್ನು ಮಕ್ಕಳು ಕುಡಿಯುವುದು ಎಷ್ಟರ ಮಟ್ಟಿಗೆ ಸುರಕ್ಷೆ.

ಕೋವಿಡ್ ಮಹಾಮಾರಿ ಕಾಲದಲ್ಲಿ ಏನಿದು ? ರಾಮನಕೊಪ್ಪಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ.

ವೀಕ್ಷಕರ ವರದಿ

Edited By : Manjunath H D
Kshetra Samachara

Kshetra Samachara

06/01/2022 10:47 am

Cinque Terre

66.6 K

Cinque Terre

1

ಸಂಬಂಧಿತ ಸುದ್ದಿ