ಹುಬ್ಬಳ್ಳಿ: ಕನ್ನಡ ಶಾಲೆ ಅಷ್ಟೇ ಅಲ್ಲ ಸರ್ಕಾರಿ ಉರ್ದು ಶಾಲೆಯ ಪರಿಸ್ಥಿತಿನೂ ಗಣಗಂಭೀರವೇ ಆಗಿವೆ. ಪಾಠ ಮಾಡಲು ಸರಿಯಾದ ಕೋಣೆಗಳಿಲ್ಲ. ಇಡೀ ಶಾಲೆಯ ಸುತ್ತ ಕಾಂಪೌಡ್ ಕೇಳಲೇ ಬೇಡಿ.ಪ್ರಯೋಗಾಲಯ, ಲೈಬ್ರರಿ ಇವೆಲ್ಲ ಈ ಶಾಲೆಗೆ ಕಲ್ಪನೆ ಆಗಿಯೇ ಉಳಿದಿವೆ.ಆದರೂ ಈ ಶಾಲೆ ಶಿಕ್ಷಕರ ಅತೀಯಾದ ವಿಶ್ವಾಸದಿಂದಲೇ ಇನ್ನೂ ಜೀವಂತವಾಗಿಯೇ ಇದೆ.
ಶಾಲೆ ಸುತ್ತ ಕಂಪೌಂಡ್ ಇಲ್ಲ. ಮಕ್ಕಳಿಗೆ ಶಾಲೆ ಮುಂದಿನ ಚಿಕ್ಕ ಜಾಗವೇ ಗ್ರೌಂಡ್. ಶಾಲೆ ಎದುರು ಮನೆಗಳೂ ಇವೆ. ಜನರ ಓಡಾಟವೂ ಇಲ್ಲಿ ಕಾಮನ್. ಶಾಲೆ ರೋಡ್ ಪಕ್ಕ ಇದಿಯೋ ಅಥವಾ ರೋಡ್್ನಲ್ಲಿಯೇ ಶಾಲೆ ಇದಿಯೋ ತಿಳಿಯೋದೇ ಇಲ್ಲ. ಬಹುತೇಕ ಮಕ್ಕಳು ರೋಡ್ ನಲ್ಲಿಯೇ ಕಾಣಿಸುತ್ತಾರೆ.
ಹುಬ್ಬಳ್ಳಿ ಮತ್ತು ನವನಗರ ಮಧ್ಯೆ ಬರುವ ಅಮರಗೋಳ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಸ್ಥಿತಿ. ಇಲ್ಲಿ ನಿಜಕ್ಕೂ ಏನೂ ಇಲ್ಲ. ಇಡೀ ಶಾಲೆ ಬಹುತೇಕ ರಸ್ತೆ ಮೇಲೆನೇ ಇದೆ. ಇಂತಹ ಸ್ಥಿತಿಯಲ್ಲಿ ಶಾಲೆಗೆ ಲೈಬ್ರರಿ,ಪ್ರಯೋಗಾಲಯ, ಕ್ರೀಡಾ ಸಾಮಗ್ರಿ, ಕಾಂಪೌಂಡ್ ಇವೆಲ್ಲ ಕನಸಿನ ಮಾತೇ ಆಗಿವೆ ಬಿಡಿ.
1939 ರಲ್ಲಿಯೇ ಆರಂಭವಾದ ಈ ಶಾಲೆಯಲ್ಲಿ ಈಗ 155 ಮಕ್ಕಳು ಓದುತ್ತಿದ್ದಾರೆ. ತಂಬಾಕು ಮುಕ್ತ ಈ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಕೂಡ ಇದೆ. ಇದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿನೇ ಎನ್್ಟಿಸಿ ಕೋರ್ಸ್ ಮಾಡಿ ಶಿಕ್ಷಕಿ ಆಗಿದ್ದಾರೆ. ಈ ಟೀಚರ್ ಗೆ ಇಲ್ಲಿ ಸರ್ಕಾರದ ಯಾವ ಸೌಲಭ್ಯವೂ ಇಲ್ಲ. ಆದರೂ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಉಳಿದಂತೆ ಅಮರಗೋಳದ ಈ ಶಾಲೆಯಲ್ಲಿ ಸೌಲಭ್ಯಕಿಂತಲೂ ಗೋಳು ಅತೀ ಹೆಚ್ಚೇ ಇವೆ.
ರೇವನ್ ಪಿ.ಜೇವೂರ್,
PublicNext,ಹುಬ್ಬಳ್ಳಿ
Kshetra Samachara
16/12/2021 04:09 pm