ಕುಂದಗೋಳ: ನಮ್ಮ ಹಾಸ್ಟೇಲ್ ವಸತಿ ಸರಿಯಿಲ್ಲಾ, ಸೊಳ್ಳೆ ಕಾಟ, ಶೌಚಾಲಯ ಚೇಂಬರ್ ಕ್ಲೋಸ್ ಆಗಿ ದುರ್ನಾತ, ಮಕ್ಕಳಿಗೆ ಓದಲು ಬರೆಯಲು ಸೂಕ್ತ ಆಸನವಿಲ್ಲಾ, ಎಲ್ಲೆಂದರಲ್ಲಿ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳು ಮಲಗಬೇಕು, ಈ ಬಗ್ಗೆ ದೂರು ನೀಡಲು ಹೋದ್ರೆ ಸಿಬ್ಬಂದಿಗಳು ಟಿಸಿ ಕೊಟ್ಟು ಮನೆಗೆ ಕಳುಹಿಸ್ತೀವಿ ಎಂದು ಭಯ ಹುಟ್ಟಿಸುತ್ತಾರೆ.
ಈ ಎಲ್ಲಾ ಸಮಸ್ಯೆಗಳನ್ನೂ ಕಳೆದ ಹಲವಾರು ವರ್ಷಗಳಿಂದ ನುಂಗಿ ಸಾಕಾಗಿ ಇಂದು ಸ್ಥಳಕ್ಕೆ ಮೇಲಾಧಿಕಾರಿಗಳು ಬರ್ಲಿ ಎಂದು ಪಟ್ಟು ಹಿಡಿದು ಕುಂದಗೋಳ ತಾಲೂಕಿನ ಬು.ತರ್ಲಘಟ್ಟ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಮಕ್ಕಳು ಉರಿ ಬಿಸಿಲಿನಲ್ಲಿ ಕೂತು ನ್ಯಾಯ ಕೇಳುತ್ತಿದ್ದಾರೆ.
ಮಕ್ಕಳಿಗೆ ನೀಡುವ ಊಟ ಕಳಪೆ ಮಟ್ಟದಿಂದ ಕೂಡಿದ್ದು ತರಕಾರಿ ಅನ್ನದಲ್ಲಿ ಹುಳಗಳ ಜೊತೆ ಅಡುಗೆ ಕೊನೆಯಲ್ಲಿ ಕಪ್ಪೆ ಸತ್ತರು ಸ್ವಚ್ಛತೆ ಮಾಡುತ್ತಿಲ್ಲಾ ಎಂದು ವಿದ್ಯಾರ್ಥಿಗಳು ಆರೋಪ ಮಾಡುತ್ತಿದ್ದಾರೆ.
ಇನ್ನೂ 6 ರಿಂದ 10 ತರಗತಿ ಹಾಸ್ಟೇಲ್ ಒಳಗೆ ದ್ವಿತೀಯ ಪಿಯುಸಿ ಮಕ್ಕಳಿಗೂ ವಸತಿ ಕಲ್ಪಿಸಿದ್ದೂ, ನೂತನ ಹಾಸ್ಟೇಲ್ ಬಳಕೆ ಮಾಡುತ್ತಿಲ್ಲಾ ಎಂದು ವಿದ್ಯಾರ್ಥಿಗಳು ಧ್ವನಿ ಎತ್ತಿದ್ದಾರೆ.
Kshetra Samachara
08/12/2021 02:00 pm