ಕುಂದಗೋಳ : ಇಲ್ಲಿಗೆ ಬಂದ್ರೇ ಮನಸ್ಸು ಹಗುರವಾಗಿ ಸ್ಪರ್ಧಾತ್ಮಕ ಜಗತ್ತಿನ ಕಡೆ ಓಡುತ್ತೆ, ಪುಸ್ತಕ ಹಾಳೆ ತಿರುವಿ ಹಾಕಿದ್ರೇ ಮುಗಿದೇ ಹೋಯ್ತು ಸಾಧನೆ ಹಂಬಲ ಹೆಗಲೇರಿ ಬಿಡುತ್ತೆ, ಪತ್ರಿಕೆ ಪುಟ ನೋಡ್ತಾ ಹೋದ್ರೆ ನಿತ್ಯ ಅದೇ ಅಭ್ಯಾಸವಾಗಿ ಬಿಡುತ್ತೆ ಅಂತಹ ಸೂಕ್ಷ್ಮ ಗಾಳಿ ಬೆಳಕಿನ ಕುಂದಗೋಳ ಪಟ್ಟಣದ ಗ್ರಾಮೀಣ ಗ್ರಂಥಾಲಯ ತನ್ನ ಸೌಲಭ್ಯದ ಮೂಲಕ ಇಡೀ ಧಾರವಾಡ ಜಿಲ್ಲೆಯಲ್ಲೇ ಹೆಸರಾಗಿದೆ.
ಓದುಗರು ಅವರ ಆಸಕ್ತಿ ಅವರ ಕ್ರೀಯಾಶೀಲತೆಗೆ ತಕ್ಕ ಪುಸ್ತಕ, ಮ್ಯಾಗಜೀನ್, ಪತ್ರಿಕೆ ಅಷ್ಟೇ ಯಾಕೆ ಡಿಜಿಟಲ್ ಕಂಪ್ಯೂಟರ್ ಸೇರಿದಂತೆ ಟ್ಯಾಬ್'ಗಳ ಸೌಲಭ್ಯವನ್ನು ಹೊಂದಿದ ಈ ಗ್ರಂಥಾಲಯ ಓದುಗರಿಗೆ ಫೇವರಿಟ್.
ನಿತ್ಯ ಬೆಳಗಾದ್ರೇ ಸಾಕು ಸಂಜೆವರೆಗೂ ಈ ಗ್ರಂಥಾಲಯಕ್ಕೆ ಓದುಗರು ಅತಿ ಆಸಕ್ತಿಯಿಂದ ಬರ್ತಾರೆ, ಓದುತ್ತಾರೆ ಕಂಪ್ಯೂಟರ್ ಅಭ್ಯಾಸದ ಜೊತೆ ಡಿಜಿಟಲ್ ಗ್ರಂಥಾಲಯದ ಸೌಲಭ್ಯ ಬಳುಸುತ್ತಾರೆ. ಇನ್ನೂ ವಿಶೇಷವಾಗಿ ಈ ಗ್ರಂಥಾಲಯದಲ್ಲಿ 45251 ಪುಸ್ತಕ ಇದ್ರೇ, ಪ್ರಸಕ್ತ ವರ್ಷ 1500 ಹೊಸ ಪುಸ್ತಕ ಬಂದಿವೆ, ನಿತ್ಯ 7 ಕನ್ನಡ, ಇಂಗ್ಲಿಷ್ ಸೇರಿ 7 ಪತ್ರಿಕೆಗಳು, 4 ಮ್ಯಾಗಜೀನ್, ಪ್ರತಿ ತಿಂಗಳು 4 ಮಾಸಿಕ ಮ್ಯಾಗಜೀನ್ ಓದುಗರ ತುಡಿತಕ್ಕೆ ಲಭ್ಯವಿದೆ.
ಡಿಜಿಟಲ್ ಗ್ರಂಥಾಲಯದ ಸೌಲಭ್ಯ ಓದುಗರಿಗೆ ಒದಗಿಸಲು 2 ಕಂಪ್ಯೂಟರ್ 4 ಟ್ಯಾಬ್'ಗಳು ಆಧುನಿಕತೆ ಸ್ಪರ್ಶವನ್ನು ಈ ಗ್ರಾಮೀಣ ಗ್ರಂಥಾಲಯಕ್ಕೆ ನೀಡಿವೆ.
ಕೇವಲ ಕುಂದಗೋಳ ಪಟ್ಟಣದ ಮಾತ್ರವಲ್ಲ ಕುಂದಗೋಳ ತಾಲೂಕಿನ 57 ಹಳ್ಳಿಗರು ಇಲ್ಲಿ ಭೇಟಿ ಕೊಡುತ್ತಾರೆ ಅದರಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವವರಿಗೆ ಈ ಗ್ರಂಥಾಲಯ ಪೂರಕ.
ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಶೈಕ್ಷಣಿಕ ಪ್ರಗತಿಗೆ ಹೆಸರಾಗಿ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಗ್ರಂಥಾಲಯಗಳ ಸಾಲಿನಲ್ಲಿ ಕುಂದಗೋಳ ಗ್ರಂಥಾಲಯ ಒಂದು ಹೆಜ್ಜೆ ಮುಂದಿದ್ದು ಗ್ರಂಥಾಲಯ ಸಹಾಯಕ ನಿಜಾಮುದ್ದೀನ್ ಸೌದಾಗರ ಗ್ರಂಥಾಲಯದಷ್ಟೇ ಓದುಗರಿಗೆ ಹತ್ತಿರವಾಗಿದ್ದಾರೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
01/12/2021 05:11 pm