ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪುಂಡರ ಅಡ್ಡೆಯಾದ ಅಳಗವಾಡಿ ಗ್ರಾಮದ ಈ ಶಾಲೆ

ನವಲಗುಂದ : ಶಾಲೆ ಎಂಬುದು ಮಕ್ಕಳಿಗೆ ದೇಗುಲ ಇದ್ದಂತೆ ಆದರೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಶಾಲೆಯಲ್ಲಿನ ಈ ವ್ಯವಸ್ಥೆ ನೋಡಿದರೆ ಇದು ಪುಂಡ ಪೋಕಿರಿಗಳ ಅಡ್ಡೆಯಾಗಿ ಬದಲಾದಂತೆ ಕಾಣುತ್ತಿದೆ.

ಇದು ಅಳಗವಾಡಿ ಗ್ರಾಮದ ಅರುಣೋದಯ ಹಿರಿಯ ಪ್ರಾಥಮಿಕ ಶಾಲೆ, ಇಲ್ಲಿ ಹೊಸ ಕಟ್ಟಡ ನಿರ್ಮಾಣವೇನೋ ವ್ಯವಸ್ಥಿತವಾಗಿದೆ.

ಆದರೆ ಆವರಣದಲ್ಲಿರುವ ಹಳೆಯ ಕಟ್ಟಡದ ಶಿಕ್ಷಕರ ಕೊಠಡಿ ಎಂದು ಬರೆದಿರುವ ಈ ಕೊಠಡಿಯನ್ನೊಮ್ಮೆ ನೋಡಿ, ಸಿಗರೇಟ್, ಮದ್ಯದ ಪ್ಯಾಕೆಟ್, ಎಲ್ಲೆಂದರಲ್ಲಿ ಗುಟಾಕಾ ತಿಂದು ಉಗುಳಿದ್ದಾರೆ.

ಮಾತ್ರವಲ್ಲದೆ ಗೋಡೆಯ ಮೇಲೆ ಬೇಕಾಬಿಟ್ಟಿಯಾಗಿ ಬರೆದಿರುವ ಪುಂಡರು ಶಾಲಾ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ.ಸದ್ಯ ಶಾಲೆಗಳು ಪುನಾರಂಭಗೊಂಡಿವೆ ಈ ಅವ್ಯವಸ್ಥೆ ತಡೆಯಲು ಶಾಲಾ ಆಡಳಿತ ಮಂಡಳಿ ಮುಂದಾಗಬೇಕಿದೆ.

Edited By : Manjunath H D
Kshetra Samachara

Kshetra Samachara

07/01/2021 12:37 pm

Cinque Terre

32.79 K

Cinque Terre

2

ಸಂಬಂಧಿತ ಸುದ್ದಿ