ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸ್ವಚ್ಛತೆಗಾಗಿ ಎಷ್ಟೇ ಎಚ್ಚರಿಸಿದರು ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ನವಲಗುಂದ : ನವಲಗುಂದ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಅಕ್ಕ ಪಕ್ಕದಲ್ಲಿ ಕೊಳಚೆ ಮತ್ತು ಹಂದಿಗಳ ಹಾವಳಿ ಹೆಚ್ಚಿವೆ, ಇದನ್ನ ಶಾಲೆ ಪ್ರಾರಂಭಕ್ಕೂ ಮುನ್ನ ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳಿಗೆ ಎಷ್ಟೇ ಎಚ್ಚರಿಸಿದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಕೈ ಕಟ್ಟಿ ಕುಳಿತಿದ್ದಾರೆ.

ಈ ಶಾಲೆಯ ಆವರಣದ ಸುತ್ತ ಹಂದಿಗಳು ತಮ್ಮ ಟಿಕಾಣಿ ಹೂಡಿವೆ, ಇನ್ನೊಂದೆಡೆ ಸಾರ್ವಜನಿಕರು ಮೂತ್ರ ಮಾಡುವ ಸ್ಥಳವಾಗಿ ಬದಲಾಗಿದೆ.

ಶಾಲೆ ಪ್ರಾರಂಭಕ್ಕೂ ಮುನ್ನ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗಬೇಕು ಅಂತಾ ಎಚ್ಚರಿಸಿದರೂ ಸಹ ಇದುವರೆಗೂ ಸ್ವಚ್ಛತೆ ಮರೀಚಿಕೆಯಾಗಿಯೇ ಉಳಿದಿದೆ.

ಶಾಲೆ ಪ್ರಾರಂಭವಾದರೂ ಸಹ ಅಧಿಕಾರಿಗಳು ತಮಗೇನು ಸಂಬಂಧವೆ ಇಲ್ಲವೇನೋ ಎಂಬಂತೆ ಕೈ ಕಟ್ಟಿ ಕುಳಿತಿದ್ದಾರೆ. ಶಾಲೆಯ ಸುತ್ತಲಿನ ಅವ್ಯವಸ್ಥೆಯಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ ಅದಕ್ಕೆ ನೇರ ಹೊಣೆ ಸಂಬಂಧ ಪಟ್ಟ ಅಧಿಕಾರಿಗಳೇ ಅನ್ನೋದ್ರಲ್ಲಿ ಸಂಶಯವೇ ಇಲ್ಲಾ...

Edited By : Manjunath H D
Kshetra Samachara

Kshetra Samachara

04/01/2021 02:35 pm

Cinque Terre

52.95 K

Cinque Terre

1

ಸಂಬಂಧಿತ ಸುದ್ದಿ